ಶಿವಮೊಗ್ಗದಲ್ಲೇ ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡುವೆ

promod mutalik eat dinner yesturday night
ಶಿವಮೊಗ್ಗ-ಹೊನ್ನಾಳಿ ರಸ್ತೆಯ ಮೇಲ್ಸೇತುವೆ ಮೇಲೆ ಕಾರಲ್ಲೇ ಕುಳಿತು ಊಟ ಮಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್. ಶಾಸಕ ಎಸ್.ಎನ್.ಚನ್ನಬಸಪ್ಪ ಇದ್ದರು.
Published on

ಶಿವಮೊಗ್ಗ: ಶಿವಮೊಗ್ಗದಲ್ಲಿ ನನ್ನ ವಿರುದ್ಧ ಒಂದೂ ಪ್ರಕರಣಗಳಿಲ್ಲ. ಆದರೂ ನನ್ನನ್ನು ತಡೆದಿರುವ ಬಗ್ಗೆ ಪ್ರಶ್ನೆ ಮಾಡಿದ್ದೆ. ಜಿಲ್ಲಾಡಳಿತ ಪೊಲೀಸರ ಮೂಲಕ ನೋಟಿಸ್ ನೀಡಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡಿ ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿಯೇ ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡುವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

ಈಗಾಗಲೇ ನಾಲ್ಕು ಜಿಲ್ಲೆಯಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಲವ್ ಜಿಹಾದ್ ಕುರಿತು ಎರಡನೇ ಆವೃತ್ತಿ ಬಿಡುಗಡೆ ಮಾಡಲೆಂದು ಬರುವ ವೇಳೆ ಪೊಲೀಸರು ತಡೆದಿದ್ದಾರೆ. ಹಿಂದುಗಳ ಜಾಗೃತಿಗಾಗಿ ಪುಸ್ತಕ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೆ. ಉದ್ದೇಶಪೂರ್ವಕವಾಗಿ ನನಗೆ ತಡೆಯೊಡ್ಡಲಾಗಿದೆ. ಇಲ್ಲಿ ಕಾಂಗ್ರೆಸ್‌ನ ದುರಾಡಳಿತ ಎದ್ದುಕಾಣುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತಾಲಿಬಾನ್‌ನಂತೆ ನಡೆದುಕೊಳ್ಳುತ್ತಿದೆ. ಹಿಂದು ವಿರೋಧಿಯಾಗಿದೆ. ನನ್ನ ವಿರುದ್ಧ ಇಲ್ಲಿ ಯಾವುದೇ

ಪ್ರಕರಣಗಳಿಲ್ಲ. ಇನ್ನು, ಪುಸ್ತಕ ಬಿಡುಗಡೆ ಕಾರ್ಯಕ್ರಮ ಒಳಾಂಗಣದಲ್ಲಿ ಆಯೋಜಿಸಲಾಗಿದೆ. ಪತ್ರಿಕಾಗೋಷ್ಠಿಗೆ ಪತ್ರಕರ್ತರು ಮಾತ್ರ

ಬರುತ್ತಾರೆ. ಇದರ ಹೊರತು ಯಾವುದೇ ಬಹಿರಂಗ ಸಭೆ ಅಥವಾ ಮೆರವಣಿಗೆ ಇಲ್ಲ. ಹಾಗಿದ್ದೂ ನನ್ನನ್ನು ನಗರ ಪ್ರವೇಶಿಸದಂತೆ

ತಡೆಯಲಾಗಿದೆ ಎಂದು ಖಾಕಿ ಪಡೆ ವಿರುದ್ಧ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net