ಎಲ್ಲ ಭಾಷೆ ಪ್ರೀತಿಸಿ, ಕನ್ನಡ ಬೆಳೆಸಿ

IMG20241130203640.jpg
Published on

ಬೆಳಗಾವಿ: ಕನ್ನಡದ ನೆಲ-ಜಲ, ಭಾಷೆ ರಕ್ಷಣೆಗೆ ಎಲ್ಲರೂ ಪಕ್ಷಭೇದ, ಜಾತಿಭೇದ ಮರೆತು ಒಂದಾದರೆ ಮಾತ್ರ ಕನ್ನಡ ಕಟ್ಟುವ ಕೆಲಸವಾಗುತ್ತದೆ ಎಂದು ಗುರುಸಿದ್ದ ಸ್ವಾಮೀಜಿ ಹೇಳಿದರು.

ನೆಹರು ನಗರದ ಕನ್ನಡ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎಲ್ಲ ಭಾಷೆ ಪ್ರೀತಿಸಿ. ಆದರೆ, ಕನ್ನಡ ಭಾಷೆ ಉಳಿಸಿ, ಬೆಳೆಸಿ. ಕನ್ನಡ ಭಾಷೆಯಲ್ಲಿ ಅನ್ಯ ಭಾಷೆಗಳು ಹೊಕ್ಕು ಕನ್ನಡ ನುಂಗಿ ಹಾಕುತ್ತಿವೆ. ಇದರಿಂದ ನಮ್ಮ ಕನ್ನಡ ಸಂಸ್ಕೃತಿ ಬಿಟ್ಟು ಬೇರೆ ಭಾಷೆಗಳ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡುವ ಪ್ರತಿಜ್ಞೆ ಮಾಡುವ ನಿರ್ಧಾರ ಕೈಗೊಳ್ಳಬೇಕು ಎಂದರು.

ಅನುಷಾ ಹಿರೇಮಠ ಮಾತನಾಡಿ, ಮಕ್ಕಳು ದೇಶದ ಆಸ್ತಿ, ಅವರಿಗೆ ಸಂಸ್ಕಾರ, ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು. ಲಿಂಗಾಯತ ಮಹಿಳಾ ಸಮಾಜದಿಂದ ಗುರುಸಿದ್ಧ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.

ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಸುನೀತಾ ಪಾಟೀಲ ಸ್ವಾಗತಿಸಿದರು. ಶೋಭಾ ಪಾಟೀಲ, ರಾಜೇಶ್ವರಿ ಹಿರೇಮಠ, ಸಾಹಿತಿ ಯ.ರು. ಪಾಟೀಲ, ಸಂಸ್ಥಾಪಕಿ ಶೈಲಜಾ ಭಿಂಗೆ, ಜಯಶೀಲಾ ಬ್ಯಾಕೋಡ, ಶೈಲಾ ಪಾಟೀಲ, ಜ್ಯೋತಿ ಬದಾಮಿ, ಸುರೇಖಾ ಮಾನ್ವಿ, ಇತರರು ಇದ್ದರು. ಶಾರದಾ ಪಾಟೀಲ ಹಾಗೂ ಅನುಪಮಾ ನಿರೂಪಿಸಿದರು. ಸಹ ಕಾರ್ಯದರ್ಶಿ ವಿದ್ಯಾ ಗೌಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net