ಜಯಶ್ರೀ ರೈತ ಸಂಘದ ಗಟ್ಟಿ ಧ್ವನಿ

Loud voice of Jayashree Raitha Sangh
ಮಹಾಲಿಂಗಪುರದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತ ಸಂಘದ ಹೋರಾಟಗಾರ್ತಿ ಜಯಶ್ರೀ ಗುರಣ್ಣವರಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿವಲಿಂಗ ಟಿರಕಿ, ಸಂಗಪ್ಪ ಹಳ್ಳೂರ, ರಾಜೇಂದ್ರ ಮಿರ್ಜಿ ಇದ್ದರು.
Published on

ಮಹಾಲಿಂಗಪುರ: ಬೆಳಗಾವಿ ಜಿಲ್ಲೆಯ ರೈತ ಸಂಘದ ಹೋರಾಟಗಾರ್ತಿ ಜಯಶ್ರೀ ಗುರಣ್ಣವರಗೆ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಶುಕ್ರವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಣಿ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಹುಟ್ಟು ಹೋರಾಟಗಾರ್ತಿ ಜಯಶ್ರೀ ರೈತ ಸಂಘದ ಗಟ್ಟಿ ಧ್ವನಿಯಾಗಿದ್ದರು. ರೈತರು, ನೇಕಾರರು ಮತ್ತು ಕಾರ್ಮಿಕರ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ಮಾಡಿದ್ದರು. ಸಾರ್ವಜನಿಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದರು. ಇಂತಹ ಹೋರಾಟಗಾರ್ತಿಯನ್ನು ಕಳೆದುಕೊಂಡು ಸಂಘ ಬಡವಾಗಿದೆ ಎಂದರು.

ಮುಖಂಡರಾದ ಸಂಗಪ್ಪ ಹಳ್ಳೂರ, ರಾಜೇಂದ್ರ ಮಿರ್ಜಿ, ಬಂದೇನವಾಜ ಪಕಾಲಿ, ಲಕ್ಷ್ಮಣ ಬ್ಯಾಳಿ, ರಾಜು ಕುಕ್ಕುಗೋಳ, ಮಲ್ಲು ಕಾಗಿ, ಗಿರಿಮಲ್ಲ ಕೈಸೊಲಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net