

ಮಡಿಕೇರಿ
ಜಿಲ್ಲೆಯಿಂದ ಆಯ್ಕೆ ಆದವರೇ ಕೊಡಗಿಗೆ ಉಸ್ತುವಾರಿ ಸಚಿವರು ಆಗುವುದಕ್ಕೆ ಕಾಲವೇ ಕೂಡಿ ಬರುತ್ತಿಲ್ಲ. ಈ ಹಿಂದೆ ಜಿಲ್ಲೆಯಿಂದ ಇಬ್ಬರು ಬಿಜೆಪಿಯ ಹಿರಿಯ ಶಾಸಕರು ಇದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊರ ಜಿಲ್ಲೆಯವರಿಗೆ ಉಸ್ತುವಾರಿ ಜವಾಬ್ದಾರಿ ಕೊಡಲಾಗಿತ್ತು. ಈಗ ಅದು ಮತ್ತೆ ಪುನರಾವರ್ತನೆ ಆಗಿದೆ. ಈಗಲೂ ಕಾಂಗ್ರೆಸ್‌ನ ಇಬ್ಬರು ಶಾಸಕರು ಕೊಡಗಿನಲ್ಲಿ ಶಾಸಕರಾಗಿದ್ದಾರೆ. ಆದರೂ ಸ್ಥಳೀಯರು ಉಸ್ತುವಾರಿಯ ಜವಾಬ್ದಾರಿಯಿಂದ ವಂಚಿತರಾಗಿದ್ದಾರೆ.
ದೂರದ ರಾಯಚೂರಿನ ಎನ್.ಎಸ್. ಭೋಸರಾಜ್ ಈಗ ಕೊಡಗಿನ ಉಸ್ತುವಾರಿ ಸಚಿವರಾಗಿದ್ದಾರೆ. ಭಾನುವಾರ ಮಡಿಕೇರಿಗೆ ಆಗಮಿಸಿದ್ದ ಅವರನ್ನು ಕಾಂಗ್ರೆಸಿಗರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮರಳಿದ್ದಾರೆ. ಬಜೆಟ್‌ಗೆ ಮೊದಲು ಮತ್ತೊಮ್ಮೆ ಬರುವುದಾಗಿಯೂ ಹೇಳಿದ್ದಾರೆ. ಸ್ಥಳೀಯ ಉಸ್ತುವಾರಿ ಸಚಿವರ ಬಗ್ಗೆ ಜನವಲಯದಲ್ಲಿ ಬೇಡಿಕೆಯ ಧ್ವನಿ ಇದ್ದರೂ ಭೋಸರಾಜ್ ಕುರಿತು ಜಿಲ್ಲೆಯ ಇಬ್ಬರು ಶಾಸಕರು ಆಶಾಭಾವನೆ ಹೊಂದಿದ್ದಾರೆ. ಅವರೊಬ್ಬ ಹಿರಿಯ ರಾಜಕಾರಣಿ ಆಗಿರುವುದರಿಂದ ಜಿಲ್ಲೆಯನ್ನು ಆದಷ್ಟು ಬೇಗ ಅರಿತುಕೊಂಡು ಇಲ್ಲಿಯ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.
ಅವರೊಬ್ಬ ಅನುಭವಿ ರಾಜಕಾರಣಿ. ಎರಡು ಬಾರಿ ಶಾಸಕ, ಒಮ್ಮೆ ವಿಧಾನಪರಿ?ತ್ ಸದಸ್ಯರಾಗಿ ಆಡಳಿತದ ಅನುಭವ ಹೊಂದಿದ್ದಾರೆ. ಸರ್ಕಾರದಲ್ಲೂ ್ಲ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು. ಕೊಡಗಿನ ಸಮಸ್ಯೆ ಬಗ್ಗೆ ಅವರ ಗಮನ ಸೆಳೆಯಲಾಗುವುದು.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
ಅವರು ಹಿರಿಯರಾಗಿದ್ದು ಅನುಭವಿಗಳೂ ಆಗಿರುವುರಿಂದ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಮತ್ತು ಇಲ್ಲಿಯ ಸಮಸ್ಯೆಗಳ ನಿವಾರಣೆಗೆ ಹಿರಿಯ, ಅನುಭವಿ ರಾಜಕಾರಣಿಯ ಸಹಾಯ ಪಡೆದುಕೊಳ್ಳಲಾಗುವುದು. ಇಲ್ಲಿ ಆಗಬೇಕಿರುವ ಕೆಲಸಗಳನ್ನು ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು.
ಡಾ.ಮಂತರ್ ಗೌಡ, ಮಡಿಕೇರಿ ಶಾಸಕ
ಕೊಡಗು ಪುಟ್ಟ ಜಿಲ್ಲೆ. ಆದರೂ ಬೇರೆ ಜಿಲ್ಲೆಗಳಿಗಿಂತ ಇಲ್ಲಿ ತನ್ನದೇ ಆದ ಸಾಕ?್ಟು ಸಮಸ್ಯೆಗಳು ಇವೆ. ಇಲ್ಲಿನವರೇ ಉಸ್ತುವಾರಿ ಸಚಿವರಾದರೆ ಅವರಿಗೆ ಮೂಲ ಸಮಸ್ಯೆಗಳು ತಿಳಿದಿರುತ್ತದೆ. ಹೊರಗಿನವರಾದರೆ ಅವರು ತಿಂಗಳಿಗೆ ಒಂದೋ ಎರಡೋ ಸಲ ಬಂದು ಹೋಗುತ್ತಾರೆ. ಇಲ್ಲಿನ ವಾಸ್ತವ ಅರಿಯುವಾಗಲೇ ಅವರ ಅವಧಿ ಮುಗಿದು ಹೋಗುತ್ತದೆ. ಹಾಗಾಗಿ ಇಲ್ಲಿನವರಿಗೇ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ.
ಕೊಡಗಿನ ಶಾಸಕರನ್ನು ಮಂತ್ರಿ ಮಾಡಿ, ಅವರಿಗೆ ಜಿಲ್ಲಾ ಉಸ್ತುವಾರಿ ನೀಡಿದ್ದರೆ, ಒಂದಷ್ಟು ಅಭಿವೃದ್ಧಿ ನಿರೀಕ್ಷೆ ಮಾಡಬಹುದಿತ್ತು. ಜಿಲ್ಲೆಯ ಭೌಗೋಳಿಕ ಹಿನ್ನೆಲೆ, ಇಲ್ಲಿನ ಜನರ ಬೇಕು ಬೇಡಿಕೆಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾತ್ರ ಗೊತ್ತಿರುತ್ತದೆ. ಶಾಸಕರು ರಾಜಕೀಯ ರಹಿತವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಮಾಹಿತಿ ನೀಡಬೇಕು. ಬಡಜನರಿಗೆ ಬಾಕಿಯಿರುವ ಹಕ್ಕುಪತ್ರ, ವಸತಿ, ರೈತರಿಗೆ ಹಾಗು ಸಂತ್ರಸ್ತರಿಗೆ ಮಳೆಹಾನಿ ಪರಿಹಾರ ಸೂಕ್ತ ಸಮಯದಲ್ಲಿ ಸಿಗಬೇಕು.