ತಾವರೆಕೆರೆ ದ್ರೌಪದಮ್ಮ ಹೂವಿನ ಕರಗ ಸಂಪನ್ನ

Untitled-1
ತಾವರೆಕೆರೆಯಲ್ಲಿ ಶ್ರೀದ್ರೌಪದಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
Published on

ನಂದಗುಡಿ: ಹೊಸಕೋಟೆ ತಾಲೂಕಿನ ತಾವರೆಕೆರೆಯಲ್ಲಿ ಶ್ರೀ ದ್ರೌಪದಮ್ಮ ದೇವಿ 74ನೇ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಏ.21 ರಿಂದ 26ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ದೇವಾಲಯದಿಂದ ಕರಗ ಹೊರಟಿತು. ಗೋವಿಂದ ಗೋವಿಂದ ಎಂಬ ನಾಮ ಜಪದೊಂದಿಗೆ ಕರಗ ಹೊರ ಬರುತ್ತಿದ್ದಂತೆ ಭಕ್ತರ ಘೋಷಣೆ ಮೊಳಗಿತು.

ನಂತರ ದೇವಾಲಯದ ಮುಂಭಾಗದ ವಿಶಾಲ ಬಯಲಿನಲ್ಲಿ ಒಂದು ಗಂಟೆಗೂ ಹೆಚ್ಚಿನ ಕಾಲ ಆಕರ್ಷಕ ಕರಗದ ನೃತ್ಯ ಪ್ರದರ್ಶನ ನಡೆಯಿತು.

ಕರಗವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕರಗಕ್ಕೆ ತಮಟೆ ಮತ್ತಿತರ ವಾದ್ಯಗಳು ಸಾಥ್​ ನೀಡಿದವು. ನಂತರ ಪ್ರತಿ ಮನೆಯಲ್ಲೂ ಕರಗಕ್ಕೆ ಮಡಿಲು ತುಂಬಿ ದೇವಿಯನ್ನು ಬರಮಾಡಿಕೊಂಡು ಕರಗದತ್ತ ಮಲ್ಲಿಗೆಯ ಮಳೆಸುರಿಸಲಾಯಿತು.

ಗ್ರಾಮದಲ್ಲಿ 22ಕ್ಕೂ ಹೆಚ್ಚು ಪಲ್ಲಕ್ಕಿ ಉತ್ಸವಗಳು, ವಾದ್ಯಗೋಷ್ಠಿ ಸಹ ನಡೆದವು. ನಂತರ ಕರಗವು ಮರಳಿ ದೇವಾಲಯ ಸೇರಿತು. 2ನೇ ಬಾರಿಗೆ ಕರಗವನ್ನು ಹೊತ್ತ ಟಿ.ಎಂ.ಲಕ್ಷಿ$್ಮ ನಾರಾಯಣ ಯಶಸ್ವಿಗೊಳಿಸಿ ಜನರ ಮನ್ನಣೆಗೆ ಪಾತ್ರರಾದರು. ಶಾಸಕ ಶರತ್​ ಬಚ್ಚೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಉದ್ಯಮಿ ಬಿ.ವಿ.ಬೈರೇಗೌಡ, ಬಿಎಂಆರ್​ಡಿಎ ನಿರ್ದೇಶಕ ಡಾ.ಎಚ್​.ಎಂ.

ಸುಬ್ಬರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net