ಲಾಟರಿ ಕಲ್ಯಾಣ ನಿಧಿ ಸಭೆ, ವಿದ್ಯಾರ್ಥಿವೇತನ ವಿತರಣೆ

New Project (23)
Published on

ಕಾಸರಗೋಡು: ಸರ್ಕಾರದ ತೆರಿಗೆಯೇತರ ಆದಾಯದ ಹೆಚ್ಚಿನ ಭಾಗ ಲಾಟರಿ ವಲಯದಿಂದಲೇ ಬರುತ್ತಿರುವುದಾಗಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಪಿ.ಅಖಿಲ್ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಲಾಟರಿ ಕಲ್ಯಾಣ ನಿಧಿ ಸದಸ್ಯರ ಸಭೆಯಲ್ಲಿ 2024ರ ಮಕ್ಕಳ ಶೈಕ್ಷಣಿಕ ವಿದ್ಯಾರ್ಥಿವೇತನದ ಜಿಲ್ಲಾಮಟ್ಟದ ವಿತರಣೆ ಉದ್ಘಾಟಿಸಿ ಮಾತನಾಡಿದರು.

ಇಂಜಿನಿಯರಿಂಗ್ ವಿದ್ಯಾರ್ಥಿ ಎನ್.ಸಿ.ಸ್ನೇಹತುಲ್ ಕೃಷ್ಣ ಅವರಿಗೆ ಸಾಂಕೇತಿಕವಾಗಿ ಚೆಕ್ ಹಸ್ತಾಂತರಿಸಲಾಯಿತು. ರಾಜ್ಯ ಲಾಟರಿ ಕಲ್ಯಾಣ ನಿಧಿ ಮಂಡಳಿ ಸದಸ್ಯ ವಿ.ಬಾಲನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಲಾಟರಿ ಸಂಸ್ಥೆಗಳ ಪ್ರತಿನಿಧಿಗಳಾದ ಇ.ಕುಞಿರಾಮನ್, ಕೆ.ಎಂ.ಶ್ರೀಧರನ್, ಪಿ.ವಿ.ಉಮೇಶನ್, ಮಧುಸೂದನನ್ ನಂಬಿಯಾರ್, ವಿ.ಬಿ.ಸತ್ಯನಾಥನ್, ಎನ್.ಕೆ.ಬಿಜುಮೋನ್, ಎಂ.ಆರ್.ರಾಜೇಶ್ ಮತ್ತು ಅರ್ಜುನನ್ ತಾಯಲಂಗಡಿ ಉಪಸ್ಥಿತರಿದ್ದರು. ಜಿಲ್ಲಾ ಲಾಟರಿ ಅಧಿಕಾರಿ ಎಂ.ಕೆ.ರಜಿತ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಲಾಟರಿ ಕಲ್ಯಾಣ ನಿಧಿ ಅಧಿಕಾರಿ ಎಂ.ವಿ.ರಾಜೇಶ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net