

ಕಾಸರಗೋಡು: ನೀರ್ಚಾಲು ಮೇಲಿನಪೇಟೆಯಲ್ಲಿ ರಸ್ತೆ ಅಡ್ಡ ದಾಟುತ್ತಿದ್ದ ಸಂದರ್ಭ ಬೈಕ್ ಡಿಕ್ಕಿಯಾಗಿ ಲಾಟರಿ ಮಾರಾಟಗಾರರೊಬ್ಬರು ಮೃತಪಟ್ಟಿದ್ದಾರೆ. ಕಣ್ಣೂರು ಅಲಂಗೋಡು ಕಾವಿಮಲೆ ನಿವಾಸಿ ಸಾಜು ಜಾರ್ಜ್(62) ಮೃತಪಟ್ಟವರು. ಸೋಮವಾರ ರಾತ್ರಿ ಅಪಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.