ಸೊರಬ: ಶಕುನವಳ್ಳಿಯಲ್ಲಿ ರಮೇಶ್‌ಗೆ ಲಾಟರಿ

17sor2
ಸೊರಬ ತಾಲೂಕು ಶಕುನವಳ್ಳಿ ಗ್ರಾಪಂನ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಪ್ರಮುಖರು ಅಭಿನಂದಿಸಿದರು.
Published on

ಸೊರಬ: ತಾಲೂಕಿನ ಶಕುನವಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಲಾಟರಿಯಲ್ಲಿ ಅದೃಷ್ಟ ಒಲಿಯಿತು.

14 ಸದಸ್ಯ ಬಲದ ಗ್ರಾಪಂನಲ್ಲಿ ಅಧ್ಯಕ್ಷರಾಗಿ ಶಂಶಾದ್ ಬಾನು ಅವಿರೋಧವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ರಮೇಶ್ ಕೃಷ್ಣಮೂರ್ತಿ ನಾಡಿಗೇರ್ ಹಾಗೂ ಬಿಜೆಪಿ ಬೆಂಬಲಿತ ನೀಲಮ್ಮ ಶಿವರಾಯಪ್ಪ ಸಾಬಾರ ತಲಾ ಆರು ಮತ ಪಡೆದರು. ಈ ಹಿನ್ನೆಲೆಯಲ್ಲಿ ನಡೆದ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ರಮೇಶ್‌ಗೆ ಅದೃಷ್ಟ ಒಲಿಯಿತು. ಚುನಾವಣಾ ಪ್ರಕ್ರಿಯೆಗೆ ಇಬ್ಬರು ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ರೈತ ಸಂಪರ್ಕ ಕೇಂದ್ರದ ಕಷಿ ಅಧಿಕಾರಿ ಧನಂಜಯಪ್ಪ ಕಾರ್ಯನಿರ್ವಹಿಸಿದರು. ಪಿಡಿಒ ರಮೇಶ್ ಸಹಕರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಪಂ ಸದಸ್ಯರಾದ ಶಾಂತಮ್ಮ ಶಿವಪ್ಪ, ಎನ್.ಎಚ್.ವಾಣಿ, ಶಿವಕುಮಾರ್ ಪಾಟೀಲ್, ಬಸವರಾಜ ಮುಂಚಿನಮನೆ, ಸುನೀತಾ ಜಗದೀಶ್, ಕಾಂಗ್ರೆಸ್ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಮುಖಂಡರಾದ ಮಹೇಶ ಶಕುನವಳ್ಳಿ, ಪಿ.ಜೆ.ನಾಗರಾಜ್, ವಿಜಯಕುಮಾರ್, ಹೆಗ್ಗಪ್ಪ, ವಿನಾಯಕ, ಅಶೋಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net