

ಕನ್ನಡ ಭಾಷೆ ಜತೆಗೆ ಕನ್ನಡಿಗರ ಬದುಕು ಸಮೃದ್ಧಗೊಳಿಸುವ ಸಂಕಲ್ಪ. ಸುಸ್ಥಿರ, ಸರ್ವಾಂಗೀಣ ಅಭಿವೃದ್ಧಿ ಹಂಬಲ. ಇವೆರಡು ನೆಲೆಯ ಮೇಲೆ ಕರ್ನಾಟಕದ ಮುನ್ನೋಟ ರೂಪುಗೊಳ್ಳಬೇಕು ಎಂದು ಸಚಿವ ಮುರುಗೇಶ್ ನಿರಾಣಿ, ಚಿತ್ರನಟಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯೆ ತಾರಾ ಅನುರಾಧ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮಹಲಿಂಗಯ್ಯ ಆಶಿಸಿದರು. ರಾಜ್ಯೋತ್ಸವ ನಿಮಿತ್ತ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಹಮ್ಮಿಕೊಂಡಿದ್ದ "ನವಕರ್ನಾಟಕ ನಿರ್ಮಾಣಕ್ಕೆ ದಿಕ್ಸೂಚಿ' ಸಂವಾದದಲ್ಲಿ ಅವರು ವಿಚಾರಧಾರೆ ಹಂಚಿಕೊಂಡರು.
| ಮಹಲಿಂಗಯ್ಯ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಪ್ರಧಾನ ಕಾರ್ಯದರ್ಶಿ
ಪ್ರವಾಸೋದ್ಯಮ ೇತ್ರವನ್ನು ಬೆಳೆಸಿ, ತಾನೂ ಬೆಳೆಯಲು ಕರ್ನಾಟಕಕ್ಕೆ ವಿಪುಲ ಅವಕಾಶಗಳಿವೆ. ಆದರೆ, ಯೋಜಿತ ರೀತಿಯಲ್ಲಿ ಪ್ರಚಾರ, ಮಹತ್ವ ಸಾರುವಲ್ಲಿ ವಿಲರಾಗಿದ್ದೇವೆ. ಕೌಶಲರಹಿತ, ಅರೆಕೌಶಲ ಹಾಗೂ ಕೌಶಲಪೂರ್ಣ ಬಹುಸ್ತರ ಉದ್ಯೋಗ, ರಾಜ್ಯದ ಬೊಕ್ಕಸಕ್ಕೆ ಆದಾಯ, ವಿದೇಶಿ ವಿನಿಮಯ ತರುವ ೇತ್ರಗಳ ಪೈಕಿ ಪ್ರವಾಸೋದ್ಯಮ ಅಗ್ರಸ್ಥಾನ ಹೊಂದಿದೆ. ಈ ೇತ್ರಕ್ಕಿರುವ ಅಗಾಧ ಸಾಮರ್ಥ್ಯ ಬಳಕೆಗೆ ಅನೇಕ ಉಪಕ್ರಮಗಳನ್ನು ಕೈಗೊಳ್ಳಬಹುದು.ರಾಜ್ಯದ ಪ್ರವಾಸೋದ್ಯಮ ಹಾಗೂ ಹೋಟೆಲ್ ಉದ್ಯಮದಲ್ಲಿ ಹೊರಗಿನವರೇ ಶೇ. 80ರಷ್ಟಿದ್ದಾರೆ. ರಾಜ್ಯದವರು ಕೇವಲ ಶೇ. 20 ಇದ್ದಾರೆ. ಇದಕ್ಕೆ ಜನರಲ್ಲಿರುವ ಕೀಳರಿಮೆಯೇ ಕಾರಣ. ಕನ್ನಡಿಗರು ಯಾವುದೇ ಕೆಲಸ ದೊಡ್ಡದು ಅಥವಾ ಸಣ್ಣದು ಎಂಬ ಭಾವನೆ ಬಿಟ್ಟು, ಲಭ್ಯ ಅವಕಾಶಗಳ ಬಳಕೆಗೆ ಮುಂದಡಿಯಿಡಬೇಕು. ಕರ್ನಾಟಕಕ್ಕೆ ವಾರ್ಷಿಕ 6 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದೇ ಕರ್ನಾಟಕದಷ್ಟೇ ಜನಸಂಖ್ಯೆ ಹೊಂದಿರುವ ್ರಾನ್ಸ್ಗೆ ವಾರ್ಷಿಕ 80 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. ನಮ್ಮ ಪ್ರವಾಸಿತಾಣ, ಕಲೆ, ಸಂಸತಿಯನ್ನು ಪರಿಚಯಿಸುವಲ್ಲಿ ಎಡವಿರುವುದನ್ನು ಇದು ಎತ್ತಿತೋರಿಸುತ್ತದೆ.
ತ್ರಿಭಾಷಾ ಲಕ
ಕರ್ನಾಟಕದಲ್ಲಿ ಪ್ರತಿಯೊಂದು ಪ್ರತಿಯೊಂದು ಹೆದ್ದಾರಿ ಹಾಗೂ ಪ್ರವಾಸಿ ತಾಣಗಳಲ್ಲಿ ತ್ರಿಭಾಷೆಯ ಸೂಚನಾ ಲಕ ಮೂಲಕ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ಒದಗಿಸಬೇಕು. ಟೂರ್ಸ್ ಮತ್ತು ಟ್ರಾವೆಲ್ಸ್ ಅಭಿವೃದ್ಧಿಪಡಿಸಬೇಕು. ಈ ಕಾರ್ಯದಲ್ಲಿ ಕನ್ನಡಿಗರ ಭಾಗಿದಾರಿಕೆಯ ಅಗತ್ಯವಿದೆ.
ವಿಮಾನಮಾರ್ಗಗಳ ಸಂಖ್ಯೆ ದ್ವಿಗುಣಗೊಳಿಸಬೇಕು: ಕೇರಳದಂತೆ ಕರ್ನಾಟಕದಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ಮಾಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯುಮಾರ್ಗಗಳ ಸಂಖ್ಯೆ ದ್ವಿಗುಣಗೊಳಿಸಿದರೆ ಪ್ರವಾಸೋದ್ಯಮದಲ್ಲಿ ಭಾರಿ ಬದಲಾವಣೆ ಹಾಗೂ ಬೆಳವಣಿಗೆ ಕಾಣಲು ಸಾಧ್ಯವಾಗಲಿದೆ.
ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ 240 ಎಕರೆ ಜಮೀನು ಅಗತ್ಯವಿದೆ. ಸದ್ಯಕ್ಕೆ 115 ಎಕರೆ ಜಮೀನು ಗುರುತಿಸಿದ್ದು, ಬಾಕಿ ಭೂಮಿ ಒದಗಿಸಬೇಕು. ಇದರಿಂದ 20,000 ಜನರಿಗೆ ನೇರ ಮತ್ತು ಒಂದು ಲ ಜನರಿಗೆ ಪರೋ ಉದ್ಯೋಗ ಸಿಗಲಿದೆ.
ಹಂಪಿ, ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆಯಿದೆ. ಹೆಚ್ಚೆಚ್ಚು ಪ್ರವಾಸಿಗರು ಬರುವ ಸ್ಥಳಗಳಲ್ಲಿ ಐಷಾರಾಮಿ ಹೋಟೆಲ್ಗಳು, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು. ಪ್ರವಾಸಿತಾಣಗಳ ವಿಶೇಷ, ವೈಶಿಷ್ಯಗಳನ್ನು ಪ್ರಚಾರ ಮಾಡಬೇಕು. ಪ್ರವಾಸಿಗರನ್ನು ಸೆಳೆಯಲು ಪ್ರವಾಸಿತಾಣಗಳಲ್ಲಿ ಸಾಂಸತಿಕ ಕೇಂದ್ರಗಳನ್ನು ಸ್ಥಾಪಿಸಿ ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸ್ಥಳಿಯ ಕುಶಲಕರ್ಮಿಗಳು ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಬೇಕು.
ರೋಡ್ ಶೋ
ಪ್ರವಾಸೋದ್ಯಮ ನೀತಿಯಡಿ ಟೂರ್ ಏಜೆಂಟರಿಗೆ ಪೋತ್ಸಾಹ ನೀಡಲಾಗುತ್ತಿದೆ. ಇಷ್ಟರಲ್ಲೆ ಲಂಡನ್ನಲ್ಲಿ ನಡೆಯಲಿರುವ ಜಾಗತಿಕ ಪ್ರವಾಸಿ ಪ್ರದರ್ಶನದಲ್ಲಿ ಕರ್ನಾಟಕ ಪಾಲ್ಗೊಂಡು ಪ್ರದರ್ಶನ, ರೋಡ್ ಶೋ ಮೂಲಕ ಮಾಹಿತಿ ನೀಡಲಾಗುವುದು. ಟೂರ್ ಆಪರೇಟರ್ಗಳನ್ನು ರಾಜ್ಯಕ್ಕೂ ಕರೆತಂದು ಮಾಹಿತಿ ನೀಡಿ, ಪ್ರವಾಸಿಗರನ್ನು ಆಕರ್ಷಿಸಲು ನೆರವಾಗುವುದಕ್ಕೆ ಕೇಳಿಕೊಳ್ಳುವ ಚಿಂತನೆಯಿದೆ. ಕರ್ನಾಟಕ ಪ್ರವಾಸೋದ್ಯಮದಲ್ಲಿ ಸ್ವಾವಲಂಬನೆ ಹೊಂದಲು 3 ವರ್ಷಗಳಿಂದ 5 ವರ್ಷಗಳವರೆಗೆ ವರ್ಷಕ್ಕೆ 2.50 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದಲ್ಲಿ ಬೆಂಗಳೂರು ಕನ್ವೆನ್ಷನ್ ವಿಸಿರ್ಟಸ್ ಬ್ಯೂರೋ ಸ್ಥಾಪಿಸಿ ಅದನ್ನು ಬಲಪಡಿಸಬೇಕು. ಇದರಿಂದ ಕರ್ನಾಟಕಕ್ಕೆ ಹೆಚ್ಚಿನ ಪ್ರವಾಸೋದ್ಯಮ ಅವಕಾಶಗಳು ಹಾಗೂ ಉದ್ಯೋಗ ಸೃಷ್ಟಿಸಲು ಸಹಕಾರಿಯಾಗಲಿದೆ.
ಉದ್ಯಮವಾಗಿ ಪರಿಗಣಿಸಿ
ಪ್ರವಾಸೋದ್ಯಮ ಮತ್ತು ಹೋಟೆಲ್ಗಳನ್ನು ರಾಜ್ಯದಲ್ಲಿ ಉದ್ಯಮ ಎಂದು ಘೋಷಿಸಲಾಗಿದೆ. ಆದರೆ ಅದನ್ನು ಅಧಿಕೃತವಾಗಿ ಪರಿಗಣಿಸಲಾಗಿಲ್ಲ. ಈ ಕಾರ್ಯ ಆದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ ಸಾವಿರಾರು ಉದ್ಯೋಗ ಸೃಷ್ಟಿಸಬಹುದಾಗಿದೆ. ಕಬಿನಿ ಜಂಗಲ್ ಲಾಡ್ಜ್ ಪ್ರಾರಂಭಿಕ ಅಡೆ&ತಡೆಗಳನ್ನು ಎದುರಿಸಿತು. ಈಗ 12 ಹೋಟೆಲ್ಗಳು ಪ್ರಾರಂಭವಾಗಿದ್ದು, 3000 ಜನರಿಗೆ ನೇರ ಉದ್ಯೋಗ ಕಲ್ಪಿಸಿದೆ. ಅಲ್ಲದೆ ಸುತ್ತಮುತ್ತಲ ಹತ್ತಾರು ಹಳ್ಳಿಗಳು ಸುಧಾರಣೆ ಬೆಳಕು ಕಂಡಿವೆ. ಇದು ಎಲ್ಲ ಪ್ರವಾಸಿತಾಣಗಳಲ್ಲೂ ಆಗಬೇಕಿದೆ.