ಸ್ವಪಕ್ಷದವರ ಮೋಸದಿಂದ ಚುನಾವಣೆಯಲ್ಲಿ ಸೋತೆ

IMG-20250207-WA0263_1
- ತಂದ್ರೆ ಗ್ರಾಮ ಪಂಚಾಯಿತಿಯ ಜೆಡಿಎಸ್ ಗ್ರಾಪಂ ಸದಸ್ಯರೊಂದಿಗೆ ಪರಾಜಿತ ಅಭ್ಯರ್ಥಿ ಪಾಪೇಗೌಡ ಸಭೆ ಗುರುವಾರ ಸಭೆ ನಡೆಸಿದರು.
Published on

ಸಾಲಿಗ್ರಾಮ: ನಮ್ಮ ಪಕ್ಷದವರು ಮಾಡಿದ ಮೋಸದಿಂದಲೇ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾನು ಸೋತೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ತಂದ್ರೆ ಕೊಪ್ಪಲು ಪಾಪೇಗೌಡ ಆರೋಸಿದರು.

ತಂದ್ರೆ ಗ್ರಾಮದಲ್ಲಿ ಜೆಡಿಎಸ್ ಗ್ರಾಪಂ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು, ತಂದ್ರೆ ಕೊಪ್ಪಲು ಗ್ರಾಮ ಅಭಿವೃದ್ಧಿ ಆಗದ ಕಾರಣ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಎಲ್ಲ ಸದಸ್ಯರು ವಿಶ್ವಾಸದಿಂದ ಪ್ರತಿ ಗ್ರಾಮದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೆವು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲೂ ಒಮ್ಮತದಿಂದ ಒಡಂಬಡಿಕೆಯಂತೆ ಅಧಿಕಾರವನ್ನು ಹಂಚಿಕೊಂಡು ಬರುತ್ತಿದ್ದವು. ಆದರೆ ಈ ಬಾರಿ ನಡೆದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಗ್ರಾಮ ಪಂಚಾಯಿತಿ ಸದಸ್ಯರು ನನಗೆ ಬೆಂಬಲ ಕೊಟ್ಟರು. ನಮ್ಮ ಪಕ್ಷದವರು ನನಗೆ ಮೋಸ ಮಾಡಿ ನಾನು ಸೋಲುವಂತೆ ಮಾಡಿದ್ದಾರೆ ಎಂದರು.

ನಮ್ಮಿಂದ ಒಮ್ಮತದಿಂದ ಮತ ಪಡೆದು ಹಿಂದೆ ಅಧ್ಯಕ್ಷ-ಉಪಾಧ್ಯಕ್ಷ ಅಧಿಕಾರ ಮಾಡಿದ ನಮ್ಮ ಪಕ್ಷದ ಸದಸ್ಯನೇ ನಮಗೆ ಮೋಸ ಮಾಡಿದ್ದಾನೆ. ಜೆಡಿಎಸ್ ಪಕ್ಷದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್‌ನಾಯಕ, ಸದಸ್ಯರಾದ ಅನಿತಾ ಕೀರ್ತಿ, ಸುನಿತಾ ಸ್ವಾಮಿ, ಪವಿತ್ರಾ ಮಂಜುನಾಥ್, ಲಕ್ಷ್ಮೀ ಮಾದೇವ್, ಸಣ್ಣಸ್ವಾಮಿ ನನಗೆ ಮತ ನೀಡಿದರು. ಅವರಿಗೆ ಕೃತಜ್ಞತೆ. ಆದರೆ ನಮ್ಮ ಪಕ್ಷದ ಸದಸ್ಯನೇ ನನಗೆ ಮೋಸ ಮಾಡಿದ್ದು ನನಗೆ ಬೇಸರ ತಂದಿದೆ. ಹಾಗಾಗಿ ಪಕ್ಷದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net