ಕಳೆದುಹೋದ ಹಾಡು ನಾಟಕ ಪ್ರದರ್ಶನ ಇಂದು

28 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಯಣ ರಂಗ ತಂಡದ ವತಿಯಿಂದ ನಗರದ ರಂಗಾಯಣದಲ್ಲಿ ತೃತೀಯಲಿಂಗ ಸಮುದಾಯದವರಿಂದ ಡಿ. 29ರಂದು ಸಂಜೆ 7 ಗಂಟೆಗೆ "ಕಳೆದುಹೋದ ಹಾಡು' ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಪಯಣ ತಂಡದ ಸಂಸ್ಥಾಪಕಿ ಚಾಂದಿನಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದು ಹೋದ ಹಾಡು ನಾಟಕ ಪ್ರವೇಶ ಉಚಿತವಾಗಿದೆ. ಮಂಗಳಾ ಎನ್​. ನಾಟಕ ನಿರ್ದೇಶಿಸಿದ್ದು, ರೂಮಿ ಹರೀಶ ಸಂಗೀತ ನೀಡಿದ್ದಾರೆ. ನಾಟಕ ಈಗಾಗಲೇ 3 ಪ್ರದರ್ಶನಗಳನ್ನು ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದೆ ಪಯಣ ತಂಡ ಪ್ರಸ್ತುತಪಡಿಸಿದ ತನಿಖೆ ನಾಟಕ 24 ಪ್ರಯೋಗಗಳನ್ನು ಕಂಡಿದೆ ಎಂದರು.

ಪಯಣ ಸಂಸ್ಥೆ 2009ರಲ್ಲಿ ನೋಂದಾಯಿತವಾಗಿದ್ದು, ಲೈಂಗಿಕ ಅಲ್ಪಸಂಖ್ಯಾತರನ್ನು ಕಳಂಕ ಹಾಗೂ ತಾರತಮ್ಯದಿಂದ ಮುಕ್ತವಾಗಿಸಲು ಕಾಯೋರ್ನ್ಮುಖವಾಗಿದೆ. ಸಮುದಾಯದ ಜನರನ್ನು ಸಂಘಟಿಸುವುದರೊಂದಿಗೆ ಅವರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು.

ರಾಜ್ಯದಲ್ಲಿ ತೃತಿಯ ಲಿಂಗ ಸಮುದಾಯದವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ಸರ್ಕಾರದ ಸಮೀಕ್ಷೆ ಪೂರ್ಣಗೊಂಡ ಬಳಿಕ ತಿಳಿಯಲಿದೆ. ರಾಜ್ಯದ ವಿಜಯಪುರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪೈಲಟ್​ ಸ್ಟಡಿ ಮಾಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭಾನು, ಕ್ರಿಸ್ಟಿ ರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net