ಅಪರಿಚಿತರ ಸಂದೇಶಕ್ಕೆ 3.19 ಲಕ್ಷ ರೂ. ಕಳೆದುಕೊಂಡರು

Huge Fraud
Published on

ಉಡುಪಿ: ಅಪರಿಚಿತರ ಮೋಸದ ಸಂದೇಶ ನಂಬಿ ಉಡುಪಿ ಕಿನ್ನಿಮೂಲ್ಕಿ ನಿವಾಸಿ ಜಾರ್ಜ್ ರಫಾಯಲ್ ಮಚಾದೋ(65) ಎಂಬುವರು 3.19 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಫೇಸ್‌ಬುಕ್ ನೋಡುತ್ತಿದ್ದಾಗ ಟ್ರೇಡಿಂಗ್‌ಗೆ ಸಂಬಂಧಿಸಿದ ಎಂಜೆಲ್ ಒನ್ ಎಂಬ ಲಿಂಕ್ ಓಪನ್ ವಾಡಿದ್ದರು. ಅಲ್ಲಿ ಹಣ ಹೂಡಿಕೆ ಬಗ್ಗೆ ಸಂದೇಶ ಹಾಗೂ ಅದರಿಂದ ಬರುವ ಲಾಭಾಂಶಗಳ ಬಗ್ಗೆ ವಾಹಿತಿ ಇತ್ತು. ಸಂದೇಶ ಸತ್ಯವೆಂದು ನಂಬಿ ಅಲ್ಲಿದ್ದ ಮೊಬೈಲ್ ಸಂಖ್ಯೆಗೆ ವಾಟ್ಸಾೃಪ್ ಮೂಲಕ ಮೆಸೇಜ್ ವಾಡಿದ್ದಾರೆ. ಡಿ.20ರಿಂದ ಜ.25ರವರೆಗೆ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಒಟ್ಟು 3,19,460 ರೂ. ಹೂಡಿಕೆ ವಾಡಿದ್ದಾರೆ. ತಿಂಗಳು ಕಳೆದರೂ ಹೂಡಿಕೆ ಮಾಡಿದ ಹಣವನ್ನಾಗಲೀ, ಲಾಭಾಂಶವನ್ನಾಗಲೀ ನೀಡದೇ ಇರುವುದರಿಂದ ವಂಚನೆಗೊಳಗಾಗಿದ್ದು ಅರಿವಿಗೆ ಬಂದಿದೆ. ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net