ಗೊರೆಬಾಳ: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಕವಿವಾಣಿಯಂತೆ ಭಾನುವಾರ ಜನರು ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಹೊಸ ಬಟ್ಟೆಗಳನ್ನು ಉಟ್ಟು ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.
ಹೊಸಳ್ಳಿ ಇ. ಜೆ ಕ್ಯಾಂಪ್‌ನ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ನೂರಾರು ಮಹಿಳೆಯರು ಕಳಸ ಕುಂಭಗಳನ್ನೊತ್ತು ಬಾಜಾ ಭಜಂತ್ರಿ ಯೋಂದಿಗೆ ದೇವಾಲಯಕ್ಕೆ ಮೆರವಣಿಗೆ ಮೂಲಕ ಬಂದು ಪೂಜೆ ಸಲ್ಲಿಸಿದರು. ನಂತರ ದಾಸೋಹ ಕಾರ್ಯಕ್ರಮ ಜರುಗಿತು.
ಗೊರೇಬಾಳ ಕ್ಯಾಂಪ್‌ನ ಗಣೇಶ ಗುಡಿಯಲ್ಲಿ ಭಾನುವಾರ ಪುರೋಹಿತರಾದ ಕೆ. ಸತ್ಯಸುಭ್ರಮಣ್ಯ ಅವರು ಹೊಸ ವರ್ಷದ ವಿಶ್ವಾವಸು ಸಂವತ್ಸರದ ಪಂಚಾಂಗದ ಭವಿಷ್ಯವನ್ನು ಜನರಿಗೆ ಹೇಳಿದರು. ಗ್ರಾಮೀಣದಲ್ಲಿ ಸೋಮವಾರ ಯುವಕರು ಬಣ್ಣದ ಓಕಳಿಯಾಡುತ್ತ ರಂಗಿನಾಟದಲ್ಲಿ ಮೈಮರೆತರು.