

ಉಡುಪಿ: ಬುದ್ಧಿಗೆ ಮಂಕು ಕವಿದರೆ ವಿದ್ಯಾವಂತನೂ ಮೂರ್ಖನಾಗುತ್ತಾನೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಈ ಘಟನೆ. ವೃತ್ತಿಯಲ್ಲಿ ವೈದ್ಯನಾದರೂ ಅಪರಿಚಿತರ ಡಿಜಿಟಲ್ ಎರೆಸ್ಟ್ ಎಂಬ ಮೋಸದಾಟಕ್ಕೆ ಬಲಿಯಾಗಿ 1 ಕೋಟಿ ರೂ. ಕಳೆದುಕೊಂಡಿದ್ದಾರೆ.
ಆತ್ರಾಡಿ ನಿವಾಸಿ ಅರುಣ್ ಕುಮಾರ್ (53) ವಂಚನೆಗೆ ಒಳಗಾದವರು. ಅಪರಿಚಿತರು ಕಸ್ಟಮ್ಸ್ ನಿಂದ ಕರೆಮಾಡುವುದಾಗಿ ತಿಳಿಸಿ, ನಿಮ್ಮ ಆಧಾರ್ ಸಂಖ್ಯೆ ಬಳಸಿ ಬುಕ್ ಆಗಿರುವ ಕೊರಿಯರ್ ನಲ್ಲಿ ಡ್ರಗ್ಸ್ ಇದೆ. ಕೋರಿಯರ್ ಪ್ರಸ್ತುತ ಮುಂಬಯಿ ಕಸ್ಟಮ್ಸ್ ವಶದಲ್ಲಿದ್ದ. ನಂತರ ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸಿ, ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದಾನೆ. ಅದರಂತೆ ಜುಲೈ 29 ರಿಂದ ಆ. 9ರ ತನಕ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಸೂಚಿಸಿ ಕೂಡಿ ಹಾಕಿದ್ದ. ನಂತರ ಈ ಪ್ರಕರಣವನ್ನು ಸರಿಪಡಿಸಲು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು, ಅದರಂತೆ ಆ. 6 ರಿಂದ 9ರ ತನಕ ಹಂತ ಹಂತವಾಗಿ ಒಟ್ಟು ರೂ. 1,33,81,000 ಹಣವನ್ನು ವರ್ಗಾಯಿಸಿದ್ದಾರೆ. ಹಣವೆಲ್ಲಾ ಖಾಲಿಯಾದ ಮೇಲೆ ಜ್ಞಾನೋದಯವಾಗಿದ್ದು, ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.