ನಕಲ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ

crime
Published on

ಹುಬ್ಬಳ್ಳಿ: ಧಾರವಾಡದ ಕೆಐಎಡಿಬಿ ಮತ್ತು ಐಡಿಬಿಐ ಬ್ಯಾಂಕಿನ ಅಧಿಕಾರಿಗಳು, ಇತರರು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ, ಕೈಗಾರಿಕೋದ್ಯಮಿಯೊಬ್ಬರ ಆಸ್ತಿ ಭೂಸ್ವಾಧೀನಕ್ಕೊಳಪಡಿಸಿ ಪರಿಹಾರ ಧನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ 75.75 ಲಕ್ಷ ರೂ. ಸರ್ಕಾರಿ ಬೊಕ್ಕಸಕ್ಕೆ ಅಕ್ರಮ ನಷ್ಟ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇವೆಲ್ಲರೂ ಶಾಮೀಲಾಗಿ ನನ್ನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಧಾರವಾಡದ ಐಡಿಬಿಐ ಬ್ಯಾಂಕಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಎಸ್‌ಎಲ್‌ಎಒ, ಕೆಐಎಡಿಬಿ ಧಾರವಾಡ ಅವರಿಗೆ ನನ್ನ ಬೇಲೂರು ಗ್ರಾಮದ ಬ್ಲಾಕ್ ನಂ. 328ರ ಒಟ್ಟು ಕ್ಷೇತ್ರ 2 ಎಕರೆ 23 ಗುಂಟೆ ಆಸ್ತಿಯನ್ನು ಭೂಸ್ವಾಧೀನಕ್ಕೊಳಪಡಿಸಿಕೊಂಡಿದ್ದಾರೆ. ಪರಿಹಾರದ ಹಣವನ್ನು ಐಡಿಬಿಐ ಬ್ಯಾಂಕಿನಲ್ಲಿ ತೆರೆದ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡು ನಂತರ ಹಣ ವಿತ್ ಡ್ರಾ ಮಾಡಿಕೊಂಡಿದ್ದಾರೆ. ಒಟ್ಟು 75.75 ಲಕ್ಷ ರೂ. ಸರ್ಕಾರಿ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ಉದ್ಯಮಿ ಗಣಪತಿ ಭಟ್ ಎಂಬುವರು ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net