ಅವೈಜ್ಞಾನಿಕ ತಡೆಗೊಡೆಯಿಂದ ಜೀವ ಹಾನಿ

ldh3
Published on

ಲಿಂಗದಹಳ್ಳಿ: ಕಲ್ಲತ್ತಿಪುರದಿಂದ ಕೆಮ್ಮಣ್ಣಗುಂಡಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರುವ ಹಳ್ಳ-ಕೊಳ್ಳಗಳಿಗೆ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ತಿರುವುಗಳಲ್ಲಿರುವ ಈ ಸೇತುವೆಗಳ ಅಕ್ಕಪಕ್ಕಗಳಲ್ಲಿ ತಡೆಗೋಡೆ ನಿರ್ಮಾಣ ಮಾಡದಿರುವುದರಿಂದ ಪ್ರತಿ ದಿನ ಕೆಮ್ಮಣ್ಣಗುಂಡಿ ಮತ್ತು ಹೆಬ್ಬೆ ಜಲಪಾತಗಳ ವೀಕ್ಷಣೆಗೆ ಬರುವ ಸಾವಿರಾರು ಪ್ರವಾಸಿಗರು ಈ ತಡೆಗೋಡೆಗಳ ಮೇಲೆ ನಿಂತು ಪೋಟೋ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಆಯಾ ತಪ್ಪಿ ಬಿದ್ದು ಜೀವಕಳೆದುಕೊಳ್ಳುವಂತಾಗಿದೆ.

ಪ್ರತಿದಿನ ಸಾವಿರಾರುಪ್ರವಾಸಿಗರು ಈ ರಸ್ತೆ ಮೂಲಕ ಸಂಚಾರ ಮಾಡುವಾಗ ಹಳ್ಳಗಳು ಮತ್ತು ಕಂದಕಗಳಲ್ಲಿ ಬೆಳೆದು ನಿಂತಿರುವ ಹಸಿರು ಮರಗಳಿಂದ ಕೂಡಿರುವ ಪ್ರಕೃತಿ ನಡುವೆ ಪೋಟೋ ತೆಗೆದುಕೊಳ್ಳುವ ಬರದಲ್ಲಿ ಎಚ್ಚರ ತಪ್ಪಿ ಅನಾಹುತ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವಾರ ತರೀಕೆರೆ ಸಮೀಪದ ಲಕ್ಷ್ಮೀಸಾಗರದ ಪ್ರೌಢಶಾಲಾ ಶಿಕ್ಷಕರೊಬ್ಬರು ಕಾಲುಚಾರಿ ಪ್ರಪಾತಕ್ಕೆ ಬಿದ್ದು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಲೋಕೋಪಯೋಗಿ ಇಲಾಖೆ ನೇರ ಕಾರಣವಾಗಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಿ ಈ ಭಾಗದ ಹಳ್ಳ ಕೊಳ್ಳಗಳ ಬದಿಗಳಲ್ಲಿ ನಿರ್ಮಾಣ ಮಾಡಿರುವ ತಡೆಗೋಡೆಗಳ ಎತ್ತರ, ದಪ್ಪವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net