

ಸುಂಟಿಕೊಪ್ಪ: ಚೆಟ್ಟಳ್ಳಿ ಚೇರಳ ಶ್ರೀಮಂಗಲ ಗ್ರಾಮದ ಹೊಸಮನೆ ಎಚ್.ಟಿ.ಪೂವಯ್ಯ ಅವರ ತೋಟಕ್ಕೆ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿದ್ದು ಕೃಷಿ ಸಲನ್ನು ನಾಶಪಡಿಸಿ ಸುಮಾರು 1.50 ಲಕ್ಷ ರೂ.ಗಳಿಗೂ ಅಕ ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಕಾಡಾನೆಗಳು ಈ ಭಾಗದಲ್ಲಿ ನಿರಂತರ ದಾಳಿ ಮಾಡುತ್ತಿದ್ದು ಹಗಲಿನಲ್ಲಿ ಬೇರೆಡೆ ವಾಸ್ತವ್ಯ ಹೂಡುತ್ತಿವೆ. ರಾತ್ರಿ ವೇಳೆ ಆಗಮಿಸುವ ಕಾಡಾನೆಗಳು ಅಡಕೆ, ಕಾಫಿ, ಕರಿಮೆಣಸು ಎಲ್ಲವನ್ನು ನಾಶಪಡಿಸಿದ್ದು ಇದರಿಂದ ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಪರಿಹಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಗಗನ ಕುಸುಮವಾಗಿದೆ. ಇದರಿಂದ ಕೃಷಿಯನ್ನು ನಂಬಿ ಜೀವನ ನಡೆಸುವವರಿಗೆ ಕಾಡಾನೆಗಳ ಕಾಟದಿಂದ ಮುಕ್ತಿಯಿಲ್ಲದಂತಾಗಿದೆ. ಇಲಾಖೆಯ ಅಕಾರಿಗಳು ಉಡಾೆ ಉತ್ತರ ನೀಡುತ್ತಾರೆ.
ಪೊನ್ನತ್‌ಮೊಟ್ಟೆಯಿಂದ ಮೊದೂರು ಭಾಗದಲ್ಲಿ ಅಡೆತಡೆ ಇಲ್ಲದೆ ಆನೆಗಳು ಆರಾಮವಾಗಿ ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿವೆ. ಈ ಭಾಗದಲ್ಲಿ ಟ್ರಂಚ್, ಸೋಲಾರ್ ಬೇಲಿ ದುರಸ್ತಿಗೊಂಡ ಕಾರಣ ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆ ಅಕಾರಿಗಳು ಇತ್ತ ಗಮನಸಿ, ಖುದ್ದಾಗಿ ಪರಿಶೀಲಿಸಿ ಕ್ರಮಕೈಗೊಳ್ಳವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.