

ಕಾನಹೊಸಹಳ್ಳಿ: ಮಕ್ಕಳಲ್ಲಿನ ಮಾನಸಿಕ ಸದೃಢರಾಗಲು ಮತ್ತು ದೈಹಿಕ ಕ್ಷಮತೆವೃದ್ಧಿಗಾಗಿ ಪ್ರಾರಂಭಿಕ ಹಂತದಲ್ಲಿ ಕ್ರೀಡಾ ಮನೋಭಾವ ಬೆಳಸುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕೆಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಸಮೀಪದ ಕಾತ್ರಿಕೆನಹಟ್ಟಿಯಲ್ಲಿ ನಡೆದ ಹುಡೇಂ ವಲಯಮಟ್ಟದ ಸಹಿಪ್ರಾಶಾಲೆಗಳ ಕ್ರೀಡಾಕೂಟದಲ್ಲಿ ಮಂಗಳವಾರ ಮಾತನಾಡಿದರು.
ಮಕ್ಕಳಿಗೆ ಪಠ್ಯ ಎಷ್ಟು ಮುಖ್ಯವೋ, ಕ್ರೀಡಾ ಚಟುವಟಿಕೆಗಳು ಅಷ್ಟೇ ಮುಖ್ಯ.
ಅಲ್ಲದೇ, ಕ್ರೀಡೆಯಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಪಾಲಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು. ಕ್ರೀಡೆ ಮಕ್ಕಳನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಪೂರಕವಾಗಿದೆ. ಭಾಗವಹಿಸುವುದು ಮುಖ್ಯ ಸೋಲು ಗೆಲವು ಬಗ್ಗೆ ಯೋಚಿಸಬಾರದು ಎಂದರು.
ಕ್ರೀಡಾಕೂಟದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಕ್ಕಳೊಂದಿಗೆ ಕಬ್ಬಡಿ ಆಟವಾಡುವ ಮೂಲಕ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದರು.
ಬಿಇಒ ಪದ್ಮನಾಭ ಕಣರ್ಂ, ಪೂಜಾರಹಳ್ಳಿ ಗ್ರಾಪಂ ಉಪಾಧ್ಯಕ್ಷೆ ದುರುಗಮ್ಮ, ತಾಪಂ ಮಾಜಿ ಸದಸ್ಯ ಹುಡೇಂ ಪಾಪನಾಯಕ,
ಹುಡೇಂ ಗ್ರಾಪಂ ಅಧ್ಯಕ್ಷ ರಾಮಚಂದ್ರ, ತಾಲೂಕು ದೈಹಿಕ ನಿರ್ದೇಶಕ ಮಂಜುನಾಥ, ಶಿಕ್ಷಕ ಭರತೇಶಕುಮಾರ್ ಪ್ರಮುಖರಾದ ಜಿ.ಓಬಣ್ಣ, ಕಲ್ಲಹಳ್ಳಿ ವೆಂಕಟೇಶ್, ಶಿಲ್ಪಾ ಪಾಲಕ್ಷಿ, ಕುರಿಬೈಯಣ್ಣ, ಜಿ.ಒ.ರಾಜಣ್ಣ, ಕೃಷ್ಣಪ್ಪ, ಗೌಡ್ರುಬೈಯಣ್ಣ, ಹರೀಶ್ ಪಾಲಣ್ಣ ಇದ್ದರು.