ಕನಕದಾಸರ ಸಂದೇಶಗಳು ಸದಾ ಕಾಲಕ್ಕೂ ಪ್ರಸ್ತುತ: ಸೂರಜ್ ಹೆಗ್ಡೆ ಹೇಳಿಕೆ

9
Published on

ಮೈಸೂರು: ಭಕ್ತ ಕನಕದಾಸರ ಸಂದೇಶಗಳು ಸದಾಕಾಲಕ್ಕೂ ಪ್ರಸ್ತುತವಾಗಿದ್ದು, ಅದನ್ನು ಅರ್ಥಮಾಡಿಕೊಂಡು ಪಾಲನೆ ಮಾಡಬೇಕಿದೆ ಎಂದು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರ ಮೊಮ್ಮಗ ಸೂರಜ್ ಹೆಗ್ಡೆ ಹೇಳಿದರು.
ಅಖಿಲ ಕರ್ನಾಟಕ ಕನಕ ಮತ್ತು ರಾಯಣ್ಣ ಸಾಂಸ್ಕೃತಿಕ ಟ್ರಸ್ಟ್, ನೌಕರರ ಒಕ್ಕೂಟ, ಮಹಾದಾಸ ಶ್ರೀ ಭಕ್ತಕನಕದಾಸ ಸೇವಾ ಸಮಿತಿ ಜನತಾನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಂಡನಾಯಕರಾಗಬೇಕಿದ್ದ ಕನಕರು ಎಲ್ಲವನ್ನೂ ತ್ಯಜಿಸಿ, ದಾಸಶ್ರೇಷ್ಠರೆನಿಸಿಕೊಂಡರು ಎಂದರು.
ಬಾಡ ಗ್ರಾಮದಲ್ಲಿ ಜನಿಸಿದ ಕನಕದಾಸರು ಎಂತಹ ಮಹಾಮಹಿಮರಾಗಿದ್ದರು ಎಂಬುದಕ್ಕೆ ಈಗಲೂ ಉಡುಪಿಗೆ ಹೋದರೆ ನಿದರ್ಶನಗಳಿವೆ. ಕುಲಕುಲವೆಂದು ಹೊಡದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಆ ಕಾಲಕ್ಕೆ ಹಾಡಿ, ಜಾತೀಯತೆಯ ವಿರುದ್ಧ ಜಾಗೃತಿ ಮೂಡಿಸಿದವರು ಎಂದು ಹೇಳಿದರು.
ಸಾಧಕರಾದ ಅಂಶಿ ಪ್ರಸನ್ನಕುಮಾರ್- ಮಾಧ್ಯಮ ಕ್ಷೇತ್ರ , ಮಿಮಿಕ್ರಿ ಗೋಪಿ- ಕಲಾ ಕ್ಷೇತ್ರ, ಡಾ.ಅಬ್ದುಲ್ ಖಾದರ್- ವೆದ್ಯಕೀಯ ಕ್ಷೇತ್ರ, ಡಾ.ಲಿಂಗದಳ್ಳಿ ಹಾಲಪ್ಪ, ಡಾ.ಡಿ. ರವಿ, ಡಾ.ಕೆ.ಇ. ಗೋವಿಂದೇಗೌಡ- ಸಾಹಿತ್ಯ ಕ್ಷೇತ್ರ ಹಾಗೂ ಆರ್. ಮಹದೇವ- ಸಮಾಜಸೇವಾ ಕ್ಷೇತ್ರ ಅವರಿಗೆ ಕನಕ ಮಾರ್ಗ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಡಾ.ಬಸಪ್ಪ ಪ್ರದಾನ ಮಾಡಿದರು.
ಮಹಾದಾಸ ಶ್ರೀ ಭಕ್ತಕನಕದಾಸ ಸೇವಾ ಸಮಿತಿ ಅಧ್ಯಕ್ಷ ಬೀರೇಗೌಡ, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಎಂ. ಶಿವಕುಮಾರ್, ಮಹೇಂದ್ರ ಕಾಗಿನೆಲೆ, ರಘುರಾಜೇ ಅರಸ್, ಹರೀಶ್ ಮೊಗಣ್ಣ, ಮಹದೇವ, ಲಕ್ಷ್ಮೇಗೌಡ, ರಾಜು, ಬಿ.ಬಸವರಾಜು, ರಮೇಶ್, ಎಸ್. ಸ್ವಾಮಿ, ಶಂಕರೇಗೌಡ, ಮಹದೇವ, ಮಾದೇಗೌಡ, ಸಿ. ಶ್ರೀನಿವಾಸ್, ಮೊಳ್ಳಯ್ಯ, ಎಸ್. ಮಹದೇವ ಹಾಡ್ಯ ಮೊದಲಾದವರು ಇದ್ದರು. ಟ್ರಸ್ಟ್ ಅಧ್ಯಕ್ಷ ಡಾ.ಮಹೇಶ್ ಚಿಕ್ಕಲ್ಲೂರು ಸ್ವಾಗತಿಸಿದರು.
ಲೋಕೇಶ್ ಮತ್ತು ತಂಡದವರು ಗಾಯನ, ಗೋಪಿ ಮಿಮಿಕ್ರಿ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net