ಕೇಂದ್ರದ ಕಾನೂನು ವಿರೋಧಿಸಿ 17ರಿಂದ ಲಾರಿ ಮುಷ್ಕರ, ಹಿಟ್ ಆಂಡ್ ರನ್ ಹೊಸ ಕಾಯ್ದೆ ವಾಪಸ್ ಗೆ ಆಗ್ರಹ

IMG_20240113_113732_482.jpg
Published on

ಹುಬ್ಬಳ್ಳಿ: ಹಿಟ್ ಆಂಡ್ ರನ್ ಕೇಸ್ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರಸ್ತಾವಿತ ಶಾಸನವು ಅತ್ಯಂತ ಕರಾಳ ಹಾಗೂ ಅವೈಜ್ಞಾನಿಕವಾಗಿದ್ದು, ಇದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಜ. 17ರಿಂದ ಮುಷ್ಕರ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಸರಕು ಸಾಗಾಣಿಕೆ ಮತ್ತು ಲಾರಿ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಬೆಳಮಕರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿನಲ್ಲಿರುವ ಲೋಪದೋಷಗಳ ಬಗ್ಗೆ ಲಾರಿ, ಬಸ್, ಟೆಂಪೋ, ಆಟೋ, ಇತರೆ ವಾಹನ ಚಾಲಕರಿಗೆ ತಿಳಿವಳಿಕೆ ನೀಡಲಾಗುವುದು. ಕಾನೂನಿನ ತಿದ್ದುಪಡಿ ಅಗತ್ಯವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದರು.

ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂ, ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂ, ರೈಲ್ವೆ ಗೂಡ್ಸ್ಶೆಡ್ ಲೋಕಲ್ ಲಾರಿ ಮಾಲೀಕರ ಸಂ, ಧಾರವಾಡ ಲಾರಿ ಓನರ್ಸ್ ಆಂಡ್ ಟ್ರಾನ್ಸಪೋರ್ಟರ್ಸ್ ಅಸೋಸಿಯೇಶನ್ ಜಂಟಿಯಾಗಿ ದಣ ರಾಜ್ಯಗಳ ಒಕ್ಕೂಟಗಳ ಸಂದಿಂದ ಬೆಂಗಳೂರಿನ ಫೆಡರೇಶನ್ ಆ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಮುಷ್ಕರ ಆಯೋಜಿಸಲಾಗಿದೆ ಎಂದರು.

ಹೊಸ ಶಾಸನವು ಜನಸಾಮಾನ್ಯರಿಗೆ ಭಾರಿ ಹೊರೆಯಾಗಲಿದೆ. ಇದರ ತಿದ್ದುಪಡಿ ಮಾಡುವುದು ಅಲ್ಲದೇ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು. ಅಂದು ಅವಳಿನಗರದ ಸುಮಾರು 20 ಸಾವಿರ ಮಿನಿ ಹಾಗೂ ದೊಡ್ಡ ಲಾರಿಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ ಎಂದರು.

ಸಂಘದ ಅಧ್ಯಕ್ಷ ವಾಸು ಕೋನರಡ್ಡಿ, ಪ್ರಕಾಶ ರಾಯ್ಕರ್, ಮಹಾವೀರ ಯರೇಶೀಮೆ, ಸಮೀರ್ ಪೀರಜಾದೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net