

ಕಾಸರಗೋಡು: ಕುಂಬಳೆ- ಬದಿಯಡ್ಕ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಕನ್ಯಪ್ಪಾಡಿ ಸನಿಹದ ಪಡಿಪ್ಪುರೆ ಎಂಬಲ್ಲಿ ಸರಕು ಸಾಗಾಟದ ಲಾರಿಯೊಂದು ಮಗುಚಿ ಬಿದ್ದು ಲಾರಿ ಚಾಲಕ ಹಾಗೂ ಸಹಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಕುಂಬಳೆಯಿಂದ ಬದಿಯಡ್ಕ ಭಾಗಕ್ಕೆ ಮೊಟ್ಟೆ ಸಾಗಿಸುತ್ತಿದ್ದ ತಮಿಳುನಾಡು ನೋಂದಣಿಯ ಲಾರಿ ರಸ್ತೆ ಅಂಚಿಗಿರುವ ಖಾಸಗಿಯವರ ಆವರಣಗೋಡೆಗೆ ಮಗುಚಿ ಬಿದ್ದಿದೆ.