ನೂತನ ಕಾನೂನು ವಿರೋಧಿಸಿ ಲಾರಿ ಮಾಲೀಕರ ಪ್ರತಿಭಟನೆ

18mdk05
ಕೇಂದ್ರ ಸರ್ಕಾರದ ಹಿಟ್ ಆ್ಯಂಡ್ ರನ್ ಕೇಸ್ ನೂತನ ಕಾನೂನು ವಿರೋಧಿಸಿ ಕುಶಾಲನಗರದಲ್ಲಿ ಕಾವೇರಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಮದಾಸ್, ಲೋಕೇಶ್, ಮಹೇಶ್, ದೊಡ್ಡಣ್ಣ ಮತ್ತಿತರರು ಇದ್ದರು.
Published on

ಕುಶಾಲನಗರ: ಕೇಂದ್ರ ಸರ್ಕಾರದ ಹಿಟ್ ಆ್ಯಂಡ್ ರನ್ ಕೇಸ್ ನೂತನ ಕಾನೂನು ವಿರೋಧಿಸಿ ಕುಶಾಲನಗರದಲ್ಲಿ ಕಾವೇರಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜಾತ್ರಾ ಮೈದಾನದಲ್ಲಿ ಲಾರಿ, ಪಿಕಪ್ ವಾಹನ, ಮಿನಿ ಗೂಡ್ಸ್ ವಾಹನ ಮತ್ತಿತರ ವಾಹನಗಳನ್ನು ನಿಲ್ಲಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಕಾವೇರಿ ಲಾರಿ ಮಾಲೀಕರ ಸಂಘದ ಗೌರವ ಅಧ್ಯಕ್ಷ ರಾಮದಾಸ್ ಮಾತನಾಡಿ, ವಾಹನಗಳು ಅಪಘಾತ ನಡೆದ ಸಂದರ್ಭದಲ್ಲಿ ಪಾದಚಾರಿ ಅಥವಾ ಇತರ ವಾಹನ ಚಾಲಕರು ಮೃತಪಟ್ಟಲ್ಲಿ ಅಂತಹ ಚಾಲಕರಿಗೆ 10 ವರ್ಷ ಜೈಲು ಮತ್ತು 7 ಲಕ್ಷ ರೂ. ದಂಡ ವಿಧಿಸುವುದು ಸರಿಯಲ್ಲ. ಇದರಿಂದ ವಾಹನ ಚಾಲಕರಿಗೆ ಹಾಗೂ ಮಾಲೀಕರಿಗೆ ಸಮಸ್ಯೆಯಾಗಲಿದೆ. ಇವರನ್ನು ನಂಬಿದ ಕುಟುಂಬದ ಸದಸ್ಯರು ಬೀದಿ ಪಾಲಾಗುವ ಸ್ಥಿತಿ ಬರಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಶಾಸನವನ್ನು ಜಾರಿಗೆ ತರಬಾರದು. ಒಂದು ವೇಳೆ ಕಾನೂನು ಇದೇ ರೀತಿಯಲ್ಲಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ವರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಪ್ರವೀಣ್‌ಕುಮಾರ್, ಖಜಾಂಚಿ ದಿನೇಶ್ ಹಾಗೂ ಸಂಘದ ಪ್ರಮುಖರಾದ ಮಹೇಶ್, ದೊಡ್ಡಣ್ಣ, ಜಯಣ್ಣ, ರಾಜಣ್ಣ, ಬಸವರಾಜ್ ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net