ಲಾರಿ ಪಲ್ಟಿ; ಚಾಲಕ ಸಾವು

WhatsApp Image 2022-08-30 at 7.56.00 AM
Published on

ಸುಂಟಿಕೊಪ್ಪ: ಕೋಳಿ ಸಾಗಾಟ ಮಾಡುತ್ತಿದ್ದ ಲಾರಿವೊಂದು ಸುಂಟಿಕೊಪ್ಪ ಸಮೀಪ ಮಾರುತಿನಗರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.


ಮಂಗಳೂರು ಮೂಲದ ನಾಗಭೂಷಣ್ ಮೃತಪಟ್ಟ ಚಾಲಕ.


ಮಂಗಳವಾರ ಮುಂಜಾನೆ ಸುಮಾರು ೫ಗಂಟೆಗೆ ಮೈಸೂರುನಿಂದ ಮಂಗಳೂರು ಕಡೆಗೆ ಕೋಳಿ ಸಾಗಾಟ ಮಾಡುತಿದ್ದ ಸಂದರ್ಭ ಸುಂಟಿಕೊಪ್ಪ ಸಮೀಪ ಮಾರುತಿನಗರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿ ಮೃತಪಟ್ಟಿದಾನೆ.


ಘಟನಾ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net