ಲಾರಿ ಓವರ್​ಟೆಕ್​ ಮಾಡಲು ಹೋಗಿ ಬೈಕ್​ ಸವಾರ ಸಾವು

Bike Accident
Published on

ಬ್ಯಾಡಗಿ: ಓವರ್​ಟೆಕ್​ ಮಾಡಲು ಹೋಗಿ ಬೈಕ್​ ಸವಾರನೊಬ್ಬ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ತಾಲೂಕಿನ ಛತ್ರ ಬಳಿ ಶುಕ್ರವಾರ ನಡೆದಿದೆ.

ಬೆಂಗಳೂರಿನ ಇಂದಿರಾ ನಗರದ ಜಯಕುಮಾರ ಕೃಷ್ಣನ್​ (39) ಮೃತ ವ್ಯಕ್ತಿ.

ಈತ ಬೈಕ್​ ಮೇಲೆ ಛತ್ರ ಕಡೆಯಿಂದ ಮೋಟೆಬೆನ್ನೂರ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಮುಂದೆ ಹೋಗುತ್ತಿದ್ದ ಲಾರಿ ಓಟರ್​ಟೆಕ್​ ಮಾಡಲು ಹೋಗಿ ಲಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net