ಅಶೋಕ ಲೈಲ್ಯಾಂಡ್​ ಲಾರಿಗೆ ಕ್ಯಾಂಟರ್​ ಡಿಕ್ಕಿ ಓರ್ವ ಸಾವು

Accident
Published on

ರಾಣೆಬೆನ್ನೂರ: ಅಶೋಕ ಲೈಲ್ಯಾಂಡ್​ ವಾಹನಕ್ಕೆ ಕ್ಯಾಂಟರ್​ ಡಿಕ್ಕಿ ಹೊಡೆದ ಪರಿಣಾಮ ಅಶೋಕ ಲೈಲ್ಯಾಂಡ್​ನ ಚಾಲಕ ಮೃತಪಟ್ಟ ಟನೆ ತಾಲೂಕಿನ ದೇವರಗುಡ್ಡ&ಚನ್ನಾಪುರ ತಾಂಡಾ ಬಳಿ ಭಾನುವಾರ ನಡೆದಿದೆ.
ತಾಲೂಕಿನ ಕುದರಿಹಾಳ ಗ್ರಾಮದ ಉಮೇಶ ಹೊನ್ನಪ್ಪ ಬೆಳಕೇರಿ (29) ಮೃತ ಚಾಲಕ.
ಈತ ತನ್ನ ವಾಹನದಲ್ಲಿ ಮಿಡಿ ಸೌತೆಕಾಯಿ ಲೋಡ್​ ಮಾಡಿಕೊಂಡು ಬಂದು ದೇವರಗುಡ್ಡ ಕ್ರಾಸ್​ ಬಳಿ ವಾಹನ ನಿಲ್ಲಿಸಿದ್ದ. ಈ ಸಮಯದಲ್ಲಿ ಕ್ಯಾಂಟರ್​ ವಾಹನದವನು ಬಂದು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಉಮೇಶನನ್ನು ಚಿಕಿತ್ಸೆಗಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net