ಡಿವೈಡರ್‌ಗೆ ಗುದ್ದಿ ಲಾರಿ ಜಖಂ

nrp 3...
Published on

ಎನ್.ಆರ್.ಪುರ: ಕೊಪ್ಪದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಲಾರಿಯೊಂದು ದೀಪ್ತಿ ಸರ್ಕಲ್ ಸಮೀಪ ಡಿವೈಡರ್‌ಗೆ ಗುದ್ದಿ, ನಂತರ ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದಿದ್ದರಿಂದ ಲಾರಿ ಸಂಪೂರ್ಣ ಜಖಂಗೊಂಡಿದೆ. ಭಾನುವಾರ ಸಂಜೆ 4.30ರ ವೇಳೆಗೆ ಕೊಪ್ಪದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದ ಬೈಪಾಸ್ ಸಮೀಪ ಡಿವೈಡರ್‌ಗೆ ಹೊಡೆದು, ನಂತರ ಬಸ್‌ತಂಗುದಾಣಕ್ಕೂ ಗುದ್ದಿದೆ. ಬಸ್ ತಂಗುದಾಣದ ಸಮೀಪ ಬಸ್‌ಗಾಗಿ ಕಾಯುತ್ತಿದ್ದವರು ಕೂದಲೆಳೆಯಲ್ಲಿ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net