ಬ್ಯಾಡಗಿ: ಲಾರಿ ಮೇಲಿಂದ ಬಿದ್ದು ಚಾಲಕ ಮೃತಪಟ್ಟ ಘಟನೆ ತಾಲೂಕಿನ ಶಿಡೇನೂರ ಗ್ರಾಮದ ಬಳಿ ಶುಕ್ರವಾರ ನಡೆದಿದೆ..ಪಟ್ಟಣದ ನಿಸರ್ಗ ನಗರದ ನಿವಾಸಿ ಕರಿಯಪ್ಪ ಮರಿಯಪ್ಪ ಸಮಾಳದ (30) ಮೃತ ಲಾರಿ ಚಾಲಕ..ಇವರು ಲಾರಿ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.