

ಸಂಡೂರು: ತಾಲೂಕಿನ ಸ್ವಾಮಿಮಲೆ ಬ್ಲಾಕ್‌ನ ಶ್ರೀಹರಿಶಂಕರ ದೇವಸ್ಥಾನದ ಬಳಿ ಎರಡನೇ ತಿರುವಿನಲ್ಲಿ ಅದಿರು ಲಾರಿ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದಾನೆ.
ಗುಜರಾತ್ ರಾಜ್ಯದ ಪಾವಟಿ ಗ್ರಾಮದ ಲಾಖಾ ಹಾಜಿಬಾಯಿ(44) ಮೃತ. ಎನ್‌ಎಂಡಿಸಿ ಬ್ಲಾಕ್‌ನಿಂದ ಗುಜರಾತ್ ಜಿಂದಾಲ್ ಮೈನ್ಸ್‌ಗೆ ಲಾರಿ ಮೂಲಕ ಕಬ್ಬಿಣದ ಅದಿರನ್ನು ಕೊಂಡೊಯ್ಯುತ್ತಿದ್ದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಲಾರಿ ಕ್ಲೀನರ್ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.