ಲಾರಿ ಚಾಲಕರ ಪ್ರತಿಭಟನೆ ಮುಂದುವರಿಕೆ

3
Published on

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ನೂತನ ಹಿಂಟ್ ಆ್ಯಂಡ್ ರನ್ ಕಾನೂನು ವಿರೋಧಿಸಿ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದಿಂದ ಗುರುವಾರವೂ ಮುಷ್ಕರ ಮುಂದುವರಿಯಿತು.

ಎರಡನೇ ದಿನವೂ ಅಗತ್ಯ ವಸ್ತುಗಳಾದ ತರಕಾರಿ, ಔಷಧ, ಹಾಲು ಹೊರತುಪಡಿಸಿ ಉಳಿದ ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯಲಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಯುತ್ತದೆ ಎಂದು ಒಕ್ಕೂಟ ಎಚ್ಚರಿಸಿದೆ. ಗುರುವಾರವೂ ನಗರದ ರೇಸ್‌ಕೋರ್ಸ್ ಬಳಿ ಇರುವ ಒಕ್ಕೂಟದ ಕಚೇರಿ ಆವರಣದಲ್ಲಿ ಸಭೆ ಸೇರಿದ ಲಾರಿ ಮಾಲೀಕರು, ಚಾಲಕರು ನೂತನ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net