ಬ್ರೇಕ್ ವಿಫಲಗೊಂಡು ಮನೆಗೆ ನುಗ್ಗಿದ ಲಾರಿ

ಚಿತ್ರ 30ಎಸ್ ಡಿ ಪಿ 03.
ಮಾಲ್ದಾರೆಯಲ್ಲಿ ಲಾರಿ ಬ್ರೇಕ್ ವಿಫಲ, ಮನೆ, ಕಂಪೌಂಡಿಗೆ ಹಾನಿಯಾಗಿರುವುದು.
Published on

ಸಿದ್ದಾಪುರ: ಬೆಳಗಾವಿಯಿಂದ ಕೊಡಗು ಜಿಲ್ಲೆಯ ಮಾಲ್ದಾರೆ ಕಡೆ ಬರುತ್ತಿದ್ದ ಹದಿನಾಲ್ಕು ಚಕ್ರದ ಲಾರಿಯ ಬ್ರೇಕ್ ವಿಫಲಗೊಂಡು ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ್ದರಿಂದ ಗೋಡೆ ಹಾನಿಯಾಗಿದೆ.

ಅಪಘಾತದಿಂದ ಮನೆಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ರಭಸಕ್ಕೆ ಕಾಂಪೌಂಡ್ ಹಾಗೂ ಮನೆ ಗೋಡೆ ಹಾನಿಯಾಗಿದ್ದು ಘಟನೆಯ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಬೆಳಗಾವಿಯಿಂದ ಕೊಡಗು ಜಿಲ್ಲೆಯ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಫಿ ಒಟ್ಟು ತುಂಬಲು ಪಿರಿಯಾಪಟ್ಟಣ ಮಾರ್ಗವಾಗಿ ಮಾಲ್ದಾರೆಗೆ ಬರುತ್ತಿದ್ದ ವೇಳೆ ಬ್ರೇಕ್ ವಿಫಲಗೊಂಡು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಕಾಂಪೌಂಡ್ ಸಂಪೂರ್ಣ ನೆಲಸಮಗೊಂಡು ಮನೆಯ ಒಂದು ಬದಿಯ ಗೋಡೆ ಹಾನಿಯಾಗಿದೆ. ಮನೆಯಲ್ಲಿದ್ದ ಮೂವರು ಭಾರಿ ಶಬ್ದ ಕೇಳಿ ತಕ್ಷಣ ಮನೆಯಿಂದ ಹೊರಬಂದಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net