

ರಾಣೆಬೆನ್ನೂರ: ಪಂಚರ್ ಆಗಿ ನಿಂತಿದ್ದ ಐಷರ್ ಗೂಡ್ಸ್ ಕ್ಯಾಂಟರ್ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಮುಂದೆ ನಿಂತಿದ್ದ ಕ್ಲಿನರ್ ಮೃತಪಟ್ಟ ಘಟನೆ ತಾಲೂಕಿನ ಮಾಕನೂರ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.
ಚಿಕ್ಕೋಡಿ ತಾಲೂಕಿನ ಗಿರಗಾವ್ ಗ್ರಾಮದ ಸಂತೋಷ ಶಿವಪ್ಪ ಚೌಗಲೆ (30) ಮೃತ ದುರ್ದೈವಿ.
ಈತ ಪಂಚರ್ ಆಗಿದ ಕ್ಯಾಂಟರ್ ವಾಹನ ಮುಂದೆ ನಿಂತುಕೊಂಡಿದ್ದ. ಈ ಸಮಯದಲ್ಲಿ ಹಿಂಬದಿಯಿಂದ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ವಾಹನ ಈತನ ಮೇಲೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.