ಅಪ್ಪೇ ಗಾಡಿಗೆ ಲಾರಿ ಡಿಕ್ಕಿ : ಮಹಿಳೆ ಸಾವು

ILK-27-2
ಇಳಕಲ್ಲ ಸಮೀಪದ ಹಿರೇಕೊಡಗಲಿ ಗ್ರಾಮದ ಹೆದ್ದಾರಿಯಲ್ಲಿ ಅಪ್ಪೇ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿರುವುದು.
Published on

ಇಳಕಲ್ಲ (ಗ್ರಾ): ಅಪ್ಪೇ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಓರ್ವ ಮಹಿಳೆ ಸಾವಿಗೀಡಾಗಿದ್ದು 8 ಜನರು ಗಾಯಗೊಂಡಿದ್ದಾರೆ.

ಸಮೀಪದ ಗುಗ್ಗಲಮರಿ ಗ್ರಾಮದ ದುರ್ಗಾದೇವಿಯನ್ನು ಅಮವಾಸ್ಯೆ ದಿನ ಶನಿವಾರ ದರ್ಶನ ಮಾಡಿ ಮರಳಿ ಬರುವಾಗ ಹಿರೇಕೊಡಗಲಿ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.

ಇಳಕಲ್ಲ ನಗರದ ಶಾರದಾ ಬಾಲಗಂಗಾಧರಸ್ವಾಮಿ ಕೊಕ್ಕರಶೇಡ (55) ಮೃತ ಮಹಿಳೆ. ಗಾಯಾಳುಗಳಾದ ಯಲ್ಲಮ್ಮ ರಾಮಣ್ಣ ವೇಷಗಾರ, ಅನಿತಾ ಶಿವಪ್ಪ ಹೊಸಮನಿ, ನಾಗರತ್ನ ರಮೇಶ ಲೋಕ್ರೆ, ಬಸಯ್ಯ ಸಂಗಯ್ಯ ಅಮಲಿಕೊಪ್ಪ, ಶಿವಮ್ಮ ಹನುಮಂತ ಹೊಸಮನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 8 ಜನ ಗಾಯಗೊಂಡಿದ್ದಾರೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಬಿ.ಪಾಟೀಲ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net