ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರ ಸಾವು

24SND-01
Published on

ಸಿಂಧನೂರು: ಮಲ್ಲದಗುಡ್ಡ ಬಳಿ ರಸ್ತೆಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ, ಶನಿವಾರ ರಾತ್ರಿ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಬಸ್ ನಿರ್ವಾಹಕ ಹುಸೇನ್ ಬಾಷಾ ಸೇರಿ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.. ಈ ಪೈಕಿ ನಾಗಲಾಪುರ ಗ್ರಾಮದ ಸುದೀಪ್ ಮಡಿವಾಳ (19), ರಾಮಪ್ಪ (70) ಮೃತಪಟ್ಟಿದ್ದಾರೆ. 16ಕ್ಕೂ ಹೆಚ್ಚಿನ ಗಾಯಾಳುಗಳನ್ನು ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಸಿಂಧನೂರಿನಿಂದ ಅಂಕಲಿಮಠಕ್ಕೆ ಹೊರಟಿತ್ತು. ರಾತ್ರಿ ಮಳೆ ಬರುತ್ತಿದ್ದು, ಬಸ್ ವೇಗವಾಗಿ ಚಲಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್‌ನಲ್ಲಿ ಸಿಲುಕಿದ್ದ ಜನರನ್ನು ಹೊರತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹೆಚ್ಚಿನ ಶ್ರಮಪಡಬೇಕಾಯಿತು. ಘಟನಾ ಸ್ಥಳಕ್ಕೆ ಎಎಸ್‌ಪಿ ಶಿವಕುಮಾರ, ಸಂಚಾರ ಠಾಣೆ ಪಿಎಸ್‌ಐ ವೆಂಕಟೇಶ ರಾಥೋಡ್ ಭೇಟಿ ನೀಡಿದ್ದರು. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net