ಬೈಪಾಸ್‌ನಲ್ಲಿ ಹೊತ್ತಿ ಉರಿದ ಲಾರಿ

22 Dwd 2
Published on

ಧಾರವಾಡ: ಹುಬ್ಬಳ್ಳಿ- ಧಾರವಾಡ ಬೈಪಾಸ್‌ನಲ್ಲಿ ಸಂಚರಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಬಂಕಾಪುರ ಚೌಕ್‌ನ ಮುತ್ತುರಾಜ ಬಸವರಾಜ ಗುಡಗೇರಿ ಅವರ ಲಾರಿ ಅವಘಡಕ್ಕೀಡಾಗಿದೆ. ಗಂಗಾವತಿಯಿ0ದ ಗೋವಾಕ್ಕೆ ಇದ್ದಿಲು ತಯಾರಿಸಲು ಬಳಸುವ ಹೊಟ್ಟು ಸಾಗಿಸಲಾಗುತ್ತಿತ್ತು.ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಕಿ ಮುಂಭಾಗಕ್ಕೂ ವಿಸ್ತರಿಸಿದ್ದರಿಂದ ಲಾರಿ ಸಂಪೂರ್ಣ ಸುಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net