ಲಾರಿಗೆ ಬೈಕ್ ಡಿಕ್ಕಿ, ಇಬ್ಬರ ಸಾವು

Accident
Published on

ಸಂಕೇಶ್ವರ: ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ-4ರ ಬಳಿ ಸೋಮವಾರ ಸಂಭವಿಸಿದೆ. ಪೂಜಾರಿಲಾಲ ಯಾದವ (45) ಹಾಗೂ ಮಿಶ್ರಿಲಾಲ ಪ್ರಸಾದ (24) ಮೃತಪಟ್ಟವರು.

ಮೃತರು ಉತ್ತರಪ್ರದೇಶ ಮೂಲ ದವರಾಗಿದ್ದು ಅಂಕೋಲಾ ಸುತ್ತಮುತ್ತ ಪೇಟಿಂಗ್ ಕೆಲಸ ಮಾಡುತ್ತಿದ್ದರು. ಬೆಳಗಾವಿ ಕಡೆಯಿಂದ ನಿಪ್ಪಾಣಿ ಕಡೆಗೆ ಬರುತ್ತಿದ್ದ ಕಂಟೇನರ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net