ಹಬ್ಬದ ದಿನವೇ ದುರಂತ: ಜವರಾಯನಾಗಿ ಬಂದ ಲಾರಿಗೆ, ಇಬ್ಬರು ಬೈಕ್ ಸವಾರರು ಬಲಿ

fgdfgdfgdfgdfgdfgdfgdggfgdgf
Published on

ಬೀದರ್: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಇಂಚೂರು ಬ್ರಿಡ್ಜ್ ಬಳಿ ನಡೆದಿದೆ.

ಕುಮಾರ್ ನೌನಾಥ್ (24), ಯಾದವ್ ಗೋವಿಂದರಾವ್ (29) ಮೃತ ದುರ್ದೈವಿಗಳು. ಮೃತಪಟ್ಡ ಇಬ್ಬರು ಲಾದಾ ಗ್ರಾಮದವರು ಎಂದು ತಿಳಿದು ಬಂದಿದೆ.

ಅಪಘಾತದ ತೀವ್ರತೆಗೆ ನಿಯಂತ್ರಣ ತಪ್ಪಿದ ಲಾರಿ ಬ್ರಿಡ್ಜ್ ಕೆಳಗೆ ಪಲ್ಟಿ ಹೊಡೆದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಮೆಹಕರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net