ಲಾರಿ-ಕ್ಯಾಂಟರ್ ಅಪಘಾತ, ತಪ್ಪಿದ ಅನಾಹುತ

14 smg 10
Published on

ಶಿವಮೊಗ್ಗ: ಭದ್ರಾವತಿ ರಸ್ತೆಯ ಮಾಚೇನಹಳ್ಳಿ ಐಟಿ ಪಾರ್ಕ್ ಎದುರು ಬುಧವಾರ ಬೆಳಗ್ಗೆ ಲಾರಿ- ಕ್ಯಾಂಟರ್ ನಡುವೆ ಅಪಘಾತವಾಗಿದ್ದು ಚಾಲಕರು ಮತ್ತು ಕ್ಲೀನರ್‌ಗಳು ಪ್ರಾಣಾಯಾದಿಂದ ಪಾರಾಗಿದ್ದಾರೆ.

ಸಾಮಿಲ್ ಬಂದಿದ್ದ ಲಾರಿ ರಿವರ್ಸ್ ತೆಗೆಯುವಾಗ ಭದ್ರಾವತಿ ಕಡೆಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಒಂದೇ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಎರಡೂ ಲಾರಿಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net