ಭೀಕರ ಅಪಘಾತ: ಕುರಿಗಾಹಿಯೊಬ್ಬನ ಸಹಿತ 70 ಕುರಿಗಳು ಸ್ಥಳದಲ್ಲೇ ಸಾವು..

Accident
Published on

ಚಿತ್ರದುರ್ಗ: ಭೀಕರ ಅಪಘಾತವೊಂದರಲ್ಲಿ ಒಬ್ಬ ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಲ್ಲದೆ, 70 ಕುರಿಗಳು ಕೂಡ ಸಾವಿಗೀಡಾಗಿವೆ. ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಕಣಿವೆ ಬಳಿ ಈ ಅಪಘಾತ ಸಂಭವಿಸಿದೆ.

ಹಿರಿಯೂರು ತಾಲೂಕಿನ ಬೆನಕನಹಳ್ಳಿಯ ಕುರಿಗಾಹಿ ಮೂಡ್ಲಪ್ಪ (47) ಸಾವಿಗೀಡಾದವರು. ಇವರು ಕುರಿಮಂದೆಯನ್ನು ಕರೆದೊಯ್ಯುತ್ತಿದ್ದಾಗ ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ಲಾರಿಯೊಂದು ಏಕಾಏಕಿ ನುಗ್ಗಿದ್ದರಿಂದ ಈ ಅಪಘಾತ ಉಂಟಾಗಿದೆ.

ತಿರುವಿನಲ್ಲಿ ಲಾರಿ ಅತಿವೇಗದಿಂದ ಬರುತ್ತಿದ್ದು, ನಿಯಂತ್ರಿಸಲಾಗದೆ ಕುರಿಮಂದೆ ಮೇಲೆ ಹರಿದಿದೆ. ಪರಿಣಾಮವಾಗಿ ಕುರಿಗಾಹಿ ಹಾಗೂ 70 ಕುರಿಗಳು ಸ್ಥಳದಲ್ಲೇ ಸಾವಿಗೀಡಾಗಿವೆ. ಅಪಘಾತದ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೊಳಲ್ಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net