ಲಾರಿಗಳ ಮಧ್ಯೆ ಡಿಕ್ಕಿ, ಓರ್ವ ಸಾವು

19-hrbd-1-Accident-Web
ಹಿರೇಬಾಗೇವಾಡಿ ಬಳಿ ಎರಡು ಲಾರಿಗಳು ಅಪಘಾತಕ್ಕೊಳಗಾಗಿರುವುದು.
Published on

ಹಿರೇಬಾಗೇವಾಡಿ: ಲಾರಿಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲಿಯೇ ಓರ್ವ ಮೃತಪಟ್ಟು, ಇನ್ನೋರ್ವನಿಗೆ ಗಾಯಗಳಾದ ಘಟನೆ ಶನಿವಾರ ಮಧ್ಯರಾತ್ರಿ ಸಮೀಪದ ಬಡೇಕೊಳ್ಳಮಠ ಕ್ರಾಸ್ ಬಳಿ ಸಂಭವಿಸಿದೆ. ಮಹಾರಾಷ್ಟ್ರದಿಂದ ತಮಿಳುನಾಡಿಗೆ ಸಕ್ಕರೆ ಲೋಡ್ ಮಾಡಿಕೊಂಡು ಹೊರಟಿದ್ದ ಲಾರಿಗಳು ಇಲ್ಲಿಯ ಬಡೇಕೊಳ್ಳಮಠ ಕ್ರಾಸ್ ಬಳಿಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ಎರಡೂ ಲಾರಿಗಳು ಹೆದ್ದಾರಿ ಮಧ್ಯದಲ್ಲಿಯೇ ಪಲ್ಟಿಯಾಗಿವೆ. ಅಪಘಾತದಿಂದ ತಮಿಳುನಾಡಿನ ತಿರುಚನಾಪಳ್ಳಿಯ ಕ್ಲೀನರ್ ಅಂಬರಸನ್ ಅಯ್ಯಕರನ್ (40) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚಾಲಕ ಸೆಲ್ವದೊರೆ ಶ್ರೀನಿವಾಸನ್(32) ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತದಿಂದ ಭಾನುವಾರ ಸಂಜೆಯವರೆಗೂ ರಸ್ತೆ ತುಂಬೆಲ್ಲ ಸಕ್ಕರೆ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಸಂಚರಿಸಬೇಕಿದ್ದ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಾಗುವಂತಾಯಿತು. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net