ಭಗವಂತನ ಸ್ಮರಣೆಯೊಂದಿಗೆ ಜೀವನ ಸಾಗಲಿ

21GKK2
ಗೋಕಾಕ ನಗರದ ಮಯೂರ ಶಾಲೆಯ ಸಭಾಭವನದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸ್ವಾಮಿ ಮಹಾಮೇಧಾನಂದಜಿ ಮಾತನಾಡಿದರು. ಸ್ವಾಮಿ ಮೋಕ್ಷಾನಂದಜಿ ಮಹಾರಾಜ, ಪ್ರೊ.ಜಿ.ಎಸ್.ಜಯದೇವ ಇದ್ದರು.
Published on

ಗೋಕಾಕ: ಸಷ್ಟಿಯೇ ಭಗವಂತನಾಗಿದ್ದು, ಸಂಸಾರ ಹಾಗೂ ವ್ಯವಹಾರ ಭಗವಂತನ ಸ್ಮರಣೆಯೊಂದಿಗೆ ಸಾಗಬೇಕು ಎಂದು ಮೈಸೂರಿನ ರಾಮಕಷ್ಣ ನೈತಿಕ ಮತ್ತು ಅಧ್ಯಾತ್ಮಿಕ ಕೇಂದ್ರ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜಿ ಹೇಳಿದರು. ನಗರದ ಮಯೂರ ಶಾಲೆಯ ಸಭಾಭವನದಲ್ಲಿ ಸ್ಥಳೀಯ ರಾಮಕಷ್ಣ ಸತ್ಸಂಗ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ತಾಯಿ, ಮಗುವಿನ ನಂಟಿನಂತೆ ಭಗವಂತನೊಂದಿಗೆ ಸಂವಾದ ಇಟ್ಟುಕೊಳ್ಳಬೇಕು. ಶಿವನ ನೆನೆಯುತ್ತ ಜೀವಿಗಳ ಸೇವೆ ಮಾಡಿ ಅವರಲ್ಲಿ ಶಿವನನ್ನು ಕಾಣಬೇಕು. ಕೆಟ್ಟದ್ದರಿಂದ ದೂರವಿದ್ದು, ಸದಾ ಭಗವಂತನ ಸ್ಮರಣೆ ಮಾಡಿ ಎಂದರು. ಚಾಮರಾಜನಗರದ ಪ್ರೊ.ಜಿ.ಎಸ್.ಜಯದೇವ, ಬೆಂಗಳೂರಿನ ಡಾ.ಎಚ್.ಎನ್.ಮುರಳೀಧರ ಹಾಗೂ ಬೆಳಗಾವಿಯ ಸ್ವಾಮಿ ಮೋಕ್ಷಾನಂದಜಿ ಮಹಾರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net