

ಮೊಳಕಾಲ್ಮೂರು: ಸತ್ಯ, ನಿಷ್ಠೆ, ಧರ್ಮದ ದಾರಿ ತೋರಿದ ಶ್ರೀಕೃಷ್ಣ ನ ತತ್ವಾದರ್ಶಗಳು ಮಾನವಕುಲಕ್ಕೆ ಚಿರಕಾಲ ದಾರಿ ದೀಪವಾಗಿವೆ ಎಂದು ಯಾವದ ಸಮಾಜದ ತಾಲೂಕಾಧ್ಯಕ್ಷ ಗುಂಡ್ಲೂರು ಕರಿಯಣ್ಣ ಹೇಳಿದರು.
ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವದಲ್ಲಿ ಮಾತನಾಡಿ, ಆಹಂಕಾರ, ಅಜ್ಞಾನವನ್ನು ತೊೆದು ಹಾಕಿ ಸುಜ್ಞಾನದ ಸಮಾಜ ಕಟ್ಟುವ ಕಾರ್ಯವೇ ಪರಮಾತ್ಮನ ಗುರಿ ಆಗಿತ್ತು. ಅದನ್ನು ಮಹಾಭಾರತದ ಮೂಲಕ ಜಗತ್ತಿಗೆ ತೋರಿಸಿಕೊಡಲಾಗಿದೆ ಎಂದರು.
ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ಶ್ರೀಕೃಷ್ಣನ ಉಪದೇಶವೇ ಆತನ ಮೂರ್ತ ರೂಪದಲ್ಲಿ ಜಗತ್ತಿಗೆ ಬೆಳಕಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣಾ ಇಲಾಖೆ ಅಧಿಕಾರಿ ಮಾಲತಿ, ಪಶುವೈದ್ಯಾಧಿಕಾರಿ ಡಾ.ರಂಗಪ್ಪ, ಬಿಇಒ ಕೆ.ತಿಪ್ಪೇಸ್ವಾಮಿ, ಪಿಎಸ್‌ಐ ಪಾಂಡುರಂಗಪ್ಪ, ರೇಷ್ಮೆ ಇಲಾಖೆ ಅಧೀಕ್ಷಕ ಮಹೇಶ್, ಕಂದಾಯ ಅಧಿಕಾರಿ ಮಲ್ಲಿಕಾರ್ಜುನ, ಕಸಾಪ ತಾಲೂಕಾಧ್ಯಕ್ಷ ಜಿಂಕಾ ಶ್ರೀನಿವಾಸ, ಐಯ್ಯಣ್ಣ, ಮುಖಂಡರಾದ ಜಯಣ್ಣ, ರವಿಕುಮಾರ, ಮೂರ್ತಿ, ಎಚ್.ಟಿ.ಚಂದ್ರಣ್ಣ, ರಾಮಾಂಜಿನೇಯ, ತಿಪ್ಪೇಸ್ವಾಮಿ, ಮುದಿಯಪ್ಪ, ಪೆನ್ನೋಬಳಸ್ವಾಮಿ, ಈರಣ್ಣ, ಶಿವಮೂರ್ತಿ, ನಾಗರಾಜ್ ಇದ್ದರು.