ಹಾರೋಬೆಳವಡಿಯಲ್ಲಿ ವೀರಭದ್ರ ದೇವರ ಜಯಂತಿ

web 5
Published on

ಧಾರವಾಡ : ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಮಂಗಳವಾರ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ವಿಜೃಂಭಣೆಯಿAದ ಜರುಗಿತು. ಪಲ್ಲಕ್ಕಿ ಉತ್ಸವ, ಹೆಣ್ಣುಮಕ್ಕಳ ಆರತಿ ಸೇವೆ, ಪುರುವಂತರಿ೦ದ ವೀರಗಾಸೆಯ ಒಡಪುಗಳ ಸೇವೆಯ ಮಧ್ಯ ಭಕ್ತಗಣದ ಭಕ್ತಿವಿಶೇಷತೆಯೊಂದಿಗೆ ನಡೆಯಿತು.

ಪಾಲ್ಗೊಂಡ ಭಕ್ತರಿಗೆ ಶೇಖಯ್ಯ ಶಿದ್ದಗಿರಿಮಠ ಸಹೋದರರು ಅನ್ನದಾಸೋಹ ನಡೆಸಿಕೊಟ್ಟರು. ರಾಚಯ್ಯ ಹಿರೇಮಠ, ಸೋಮನಗೌಡ ಕಲ್ಲನಗೌಡ್ರ, ಮಡಿವಾಳಯ್ಯ ಶಿದ್ದಗಿರಿಮಠ, ಬಸನಗೌಡ ಪಾಟೀಲ, ವಿರುಪಾಕ್ಷಪ್ಪ ಜಕ್ಕಣ್ಣವರ, ಫಕ್ಕೀರಪ್ಪ ಪಾರ್ವತಿ, ರಾಮಣ್ಣ ಕಣಾಜಿ, ನಿವೃತ್ತ ಪಿ.ಎಸ್.ಐ. ಕಲ್ಲನಗೌಡ ಶಿದ್ದನಗೌಡರ, ರಾಮಣ್ಣ ಜಕ್ಕಣ್ಣವರ ಇತರರು ಇದ್ದರು. ಜಯಂತಿಯ ಅಂಗವಾಗಿ ವೀರಭದ್ರ ದೇವರಿಗೆ ಏಕಾದಶ ರುದ್ರಾಭಿಷೇಕ ಹಾಗೂ ವಿಶೇಷ ಪುಷ್ಪಾಲಂಕಾರ ಪೂಜೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net