ಬುದ್ಧ ಸ್ವರೂಪಿ ಸಿದ್ಧೇಶ್ವರ ಶ್ರೀಗಳು

Lord Siddheshwar in the form of Buddha
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಜಾಗತಿಕ ತಾತ್ವಿಕ ಚಿಂತನೆಗಳು ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ನ್ಯಾಯಮೂರ್ತಿ ಕೃಷ್ಣ ದೀತ, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.
Published on

ವಿಜಯಪುರ: ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳಿಗೆ ಜನಸಾಮಾನ್ಯರು, ಹಿರಿಯರು ಹಾಗೂ ರೈತರೆಂದರೆ ಅಪಾರ ಪ್ರೀತಿ. ದೊಡ್ಡ&ದೊಡ್ಡ ವ್ಯಕ್ತಿಗಳಿಗಿಂತ ಅತ್ಯಂತ ಸರಳ ಸಾಮಾನ್ಯ ಜನರು ಬಂದರೆ ಸಾಕು ಶ್ರೀಗಳ ಮನಸ್ಸು ಅರಳುತ್ತಿತ್ತು ಎಂದು ಗದುಗಿನ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಹೇಳಿದರು.

ನಗರದ ಾನಯೋಗಾಶ್ರಮದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದ ಹಿನ್ನೆಲೆ ಸೋಮವಾರ ಹಮ್ಮಿಕೊಂಡಿದ್ದ "ಜಾಗತಿಕ ತಾತ್ವಿಕ ಚಿಂತನೆಗಳು' ಎಂಬ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧೇಶ್ವರ ಅಪ್ಪಾವರು ಒಂದು ಊರಿನಿಂದ, ಇನ್ನೊಂದು ಊರಿಗೆ ಹೊರಟರೆ ಸಾಕು, ಸಾವಿರಾರು ಜನರು ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಕಾರಣ ಅವರು ಬುದ್ಧನ ಸ್ವರೂಪಿಯಾಗಿದ್ದರು ಎಂದರು.

ಜಗತ್ತಿನಲ್ಲಿ ಎಷ್ಟು ಜನ ತತ್ವಾನಿಗಳು ಆಗಿ ಹೋಗಿದ್ದಾರೋ ಅವರ ಹೆಸರುಗಳೆಲ್ಲ ಅಪ್ಪಾವರ ನಾಲಿಗೆ ತುದಿಯಲ್ಲಿದ್ದವು. ಸಾಕ್ರೇಟಿಸ್​, ಪ್ಲೇಟೋ ಸೇರಿ ಹಲವು ತತ್ವಜ್ಞಾನಿಗಳ ಸಾಧನೆ ಬಗ್ಗೆ ಆಳವಾದ ಾನವನ್ನು ಶ್ರೀಗಳು ಹೊಂದಿದ್ದರು. ಜಾಗತಿಕ ತತ್ವ ಚಿಂತನೆಗಳನ್ನು ಒಟ್ಟಾಗಿ ದೇಹ ರೂಪದಲ್ಲಿ ನೋಡಬೇಕಾದರೆ ಅದು ಶ್ರೀ ಸಿದ್ಧೇಶ್ವರ ಅಪ್ಪನವರು. ಅಲ್ಲದೆ, ಆನಂದ ಸ್ವರೂಪಿಗಳು ತಾತ್ವಿಕ ಚಿಂತನೆಯಲ್ಲಿ ಬದುಕಿದರೆ ಹೇಗೆ ಬದುಕಬೇಕು ಎನ್ನುವುದನ್ನು ಸಿದ್ಧೇಶ್ವರ ಶ್ರೀಗಳನ್ನು ನೋಡಿ ಅರಿಯಬೇಕು. ಅವರು ಯೋಗ ಮಾಡಿ, ಸಾಧನೆ ಮಾಡಿ ಯೋಗಿ ಆದವರಲ್ಲ. ಬದಲಾಗಿ ಜನ್ಮಥಾ ಯೋಗಿಯಾಗಿದ್ದರು ಎಂದರು.

ಅತಿಥಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ದೀತ ಮಾತನಾಡಿ, ನಾನು ಪ್ರಥಮ ಬಾರಿಗೆ ಸಿದ್ಧೇಶ್ವರ ಶ್ರೀಗಳ ಪಕ್ಕದಲ್ಲಿ ಕುಳಿತಾಗ ನನಗೆ ಅನುಭವವಾಗಿದ್ದು ನಾನು ಸಾಾತ್​ ರಾಮಕೃಷ್ಣ ಪರಮಹಂಸರ ಪಕ್ಕದಲ್ಲಿಯೇ ಕುಳಿತಿದ್ದೇನೆ ಎಂದು ಭಾಸವಾಯಿತು. ಅಪೂರ್ಣವಾಗಿದ್ದ ನಾನು ಪೂರ್ಣಗೊಂಡ ಅನುಭವವಾಯಿತು ಎಂದು ಹೇಳಿದರು.

ಶ್ರೀಗಳ ಮುಖದ ಶಾಂತತೆ ನನ್ನ ಎಲ್ಲ ಪ್ರಶ್ನೆಗಳಿಗೂ ಮೌನವಾಗಿಯೇ ಉತ್ತರ ನೀಡಿತು. ಅವರ ಮಾತುಗಳು ನನ್ನ ಜೀವನದಲ್ಲಿ ಕವಿದ ಕತ್ತಲನ್ನು ಸರಿಸಿ ಬೆಳಕಿನ ದೀಪ ಹಚ್ಚಿತು. ಆ ಸಮಯದಲ್ಲಿ ನಾನು ಅತ್ಯಂತ ಖಿನ್ನತೆಗೆ ಒಳಗಾಗಿದ್ದೆ. ಜೀವನದಲ್ಲಿ ಅತ್ಯಂತ ದು@ಖದ ಸಮಯ ನನ್ನದಾಗಿತ್ತು.

ಆಗ ಆ ಸಮಯದಲ್ಲಿ ಶ್ರೀಗಳು ನನ್ನ ಬದುಕಿನಲ್ಲಿ ಬಂದಂತಹ ಭಗವಂತರಾದರು. ಬದುಕಿಗೆ ಹೊಸ ರೂಪ ನೀಡಿದರು. ಕಷ್ಟಗಳನ್ನು ಮೆಟ್ಟಿ ನಿಂತು ಹೇಗೆ ಬದುಕಬೇಕು ಎಂದು ಕಲಿಸಿದವರು. ಮುಳುಗುತ್ತಿರುವ ನನ್ನ ಜೀವನದ ದೋಣಿಯಿಂದ ಸದ್ಯ ನಾನು ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದರು.

ವಿ.ಪ. ಮಾಜಿ ಸದಸ್ಯ ಅರುಣ ಶಹಾಪುರ, ಭಾಷಣ ಮಾಡುವುದೆಂದರೆ ನನಗೆ ಪಂಚಪ್ರಾಣ. ಆದರೆ ಶ್ರೇಷ್ಠ ಸಂತ ಶ್ರೀ ಸಿದ್ಧೇಶ್ವರ ಅಪ್ಪನವರ ಬಗ್ಗೆ ಮಾತನಾಡುವುದು ಸರಳವಲ್ಲ. ಅವರ ಬಗ್ಗೆ ಮಾತನಾಡಲು ಯಾವ ಪದಗಳು ಹೋಲಿಕೆ ಆಗುವುದಿಲ್ಲ. ಎಲ್ಲದಕ್ಕೂ ಮೀರಿದ ಮಹಾತ್ಮರು. ಬಿಜ್ಜರಗಿ ಗ್ರಾಮದಲ್ಲಿ ಭಾಷ್ಕಾರಾಚಾರ್ಯರ ಸಂಶೋಧನೆ ಪ್ರಾರಂಭವಾಗಲು ಅದರ ಬಗ್ಗೆ ಚರ್ಚೆ ಹುಟ್ಟು ಹಾಕಿದವರೇ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರು. ಭಾಷ್ಕಾರಾಚಾರ್ಯ ನಮ್ಮವರು ಎಂಬುವುದನ್ನು ಇಡೀ ಜಗತ್ತಿಗೆ ತೋರಿಸಿ ಕೊಡಲು ಕಾರಣೀಭೂತರಾದವರು ಅಪ್ಪನವರು ಎಂದರು.

ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹಾಗೂ ವಿಜಯಪುರದ ಶ್ರೀ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜ್ಯೋರ್ತಿಲಿಂಗ ಹೊನಕಟ್ಟಿ ಜಾನಪದ ಗೀತೆ ಹಾಡಿದರು. ಚಾಣಕ್ಯ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್​.ಟಿ. ಮೇರವಾಡೆ ಸ್ವಾಗತಿಸಿದರು, ಸಂಗಮೇಶ ಬಾಬು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net