ದಾಸತ್ವದ ಮಹಿಮೆ ತಿಳಿಸಿದ ಶ್ರೀರಾಮರು

Lord Rama preached the glory of slavery
ಶ್ರೀರಾಮರು
Published on

ವಿಜಯಪುರ: ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ, ಪರಮ ಸವೋರ್ತ್ತಮನು ಆದ ನಾರಾಯಣನು ಮೊದಲು ಸಾಾತ್​ ಲಕ್ಷಿ$್ಮದೇವಿಯ ದಾಸ ಆಗಿದ್ದರು. ನಂತರ ಶ್ರೀ ರಾಮದೇವರು ದಾಸರಿಗೆ ಜಗತ್ತಿಗೆ ದಾಸತ್ವ ಹೇಗೆ ಮಾಡಬೇಕೆಂದು ತೋರಿಸಿಕೊಟ್ಟಿದ್ದಾರೆ ಎಂದು ಪಂ. ಮಧ್ವಾಚಾರ್ಯ ಮೊಖಾಶಿ ಹೇಳಿದರು.

ನಗರದ ದಿವಟಗೇರಿ ಗಲ್ಲಿಯ ಶ್ರೀ ರಾವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪೊಜೆಕ್ಟ್​ ಸಹಯೋಗದಲ್ಲಿ ಎರಡು ದಿನ ನಡೆದ ಭಜನಾ ಮಂಡಳಿಗಳ ಸ್ಪರ್ಧೆಯ ಭಾನುವಾರ ಹಮ್ಮಿಕೊಂಡಿದ್ದ ಸಮಾರೋಪದಲ್ಲಿ ಮಾತನಾಡಿದ ಅವರು, ವ್ಯಾಸರಾಯರ ಕಾಲದಲ್ಲಿ ಪುರಂದರದಾಸರನ್ನು ಶಿರೋರತ್ನವನ್ನು ಪಡೆದ ನಾವೆಲ್ಲರೂ ಧನ್ಯರು ಎಂದರು.

ಶ್ರೀಮಠದ ಆಧ್ಯಕ್ಷ ಪ್ರಕಾಶ ಅಕ್ಕಲಕೋಟ ಮಾತನಾಡಿ, ದಾಸ ಸಾಹಿತ್ಯ ಮಾತ್ರವಲ್ಲದೆ, ಕನ್ನಡ ಸಾಹಿತ್ಯ ೇತ್ರಕ್ಕೂ ಪುರಂದರ ದಾಸರ ಕೊಡುಗೆ ಅಪಾರವಾಗಿದೆ. ಪುರಂದರದಾಸರ ನೆನೆದು ಧರ್ಮ ಕಾರ್ಯದ ತತ್ವದಡಿ ನಮ್ಮ ಶ್ರೀಮಠವು ಸಾಗಿದೆ ಎಂದರು.

ಪಂ. ನರಹರಿ ಅಚಾರ್ಯ ಮಾತನಾಡಿದರು. ಸ್ಪರ್ಧೆಯಲ್ಲಿ 20 ಕ್ಕೂ ಹೆಚ್ಚು ಭಜನಾ ಮಂಡಳಿಗಳು ಭಾಗವಹಿಸದ್ದವು. ಸಾವಿರಾರು ಸಂಖ್ಯೆಯಲ್ಲಿ ಮಾತೆಯರು ಪುರಂದರ ದಾಸರ ಕೃತಿಗಳನ್ನು ಹಾಡಿದರು. ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿ ಪ್ರಥಮ ಸ್ಥಾನ, ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ ದ್ವೀತಿಯ ಹಾಗೂ ಶ್ರೀ ಗುರುರಾಜ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದವು.

ಅರ್ಚಕರಾದ ಶ್ರೀನಿವಾಸಚಾರ್ಯ ಪೂಜಾರ, ಅರವಿಂದ ಕುಲಕರ್ಣಿ, ವೆಂಕಟೇಶ ಖಾಸನೀಸ, ಪ್ರವಿಣ ಜೋಶಿ, ವಾಮನ ಕುಲಕರ್ಣಿ, ವೆಂಕಟೇಶ ಗುಡಿ, ಬಿಂದುಮಾಧವ ಖಾಸನೀಸ, ಗೋವಿಂದ ಜೋಶಿ, ವಿಕಾಸ ಪದಕಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಜಯತೀರ್ಥ ಮಂಗಲಗಿ, ಪ್ರಾಣೇಶ ಮಮದಾಪೂರ, ಗೋವಿಂದ ದೇಶಪಾಂಡೆ, ರಾಜು ಸಾಲೋಟಗಿ, ಗುಂಡು ಜೋಶಿ, ರಾು ಜೋಶಿ, ವಾದಿರಾಜ ಜೋಶಿ, ವಿಜೇಯಿಂದ್ರ ನ್ಯಾಮಣ್ಣವರ ಮತ್ತಿತರರಿದ್ದರು. ಭಾಗ್ಯಶ್ರೀ ಕಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net