ಭಗವಂತನ ಸ್ಮರಣೆಯಿಂದ ನೆಮ್ಮದಿ

28CHR01
Published on

ಚೌಳಹಿರಿಯೂರು: ಪಂಚ ಭೂತದಿಂದ ಆದ ಶರೀರ ಪಂಚ ಭೂತಗಳಲ್ಲಿ ವಿಲೀನವಾಗಬೇಕು. ಭಗವಂತನನ್ನು ಸ್ಮರಿಸುವುದರಿಂದ ನಮ್ಮೊಳಗಿನ ಕಲ್ಮಶ ದೂರವಾಗುತ್ತದೆ ಎಂದು ಜಂತಿಕೊಳಲು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕ ಈಶ್ವರಪ್ಪ ತಿಳಿಸಿದರು.

ಸ್ಥಳೀಯ ಪ್ರಜಾಪಿತ ಬ್ರಹಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವರು ಸ್ವಯಂ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಯಾಗಬೇಕಿದೆ ಎಂದರು.

ಕುರುಬರಹಳ್ಳಿ ಯೋಗ ಮತ್ತು ಆಧ್ಯಾತ್ಮ ಸಂಸ್ಥೆಯ ರಾಮಗುರುಜಿ ಮಾತನಾಡಿ, ಭಕ್ತಿ ಎಂಬುದು ಬೂಟಾಟಿಕೆಯಾಗದೆ ಮನದಲ್ಲಿರಬೇಕು. ಇಂತಹ ಕಾರ್ಯಕ್ರಮಗಳಿಗೆ ಸ್ವಯಂ ಪ್ರೇರಿತರಾಗಿ ಭಾಗವಹಿಸುವುದರಿಂದ ಮನಸ್ಸಿಗೆ ಏಕಗ್ರತೆ ಮೂಡುತ್ತದೆ ಎಂದರು.

ಕಡೂರು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕ ಜ್ಞಾನೇಶ್ವರಿ ಅಕ್ಕ ಮಾತನಾಡಿ, ಪರಂ ಜ್ಯೋತಿಯ ಜತೆಗೆ ಆತ್ಮಜ್ಯೋತಿ ಬೆಳಗಿಸಿಕೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ. ಇತ್ತಿಚಿನ ದಿನಗಳಲ್ಲಿ ಜನರಲ್ಲಿ ಕ್ರೋದ, ಮದ, ಮತ್ಸರ ತುಂಬಿ ತುಳುಕುತ್ತಿದೆ ಇದರಿಂದ ದೂರವಿರಲು ಆಧ್ಯಾತ್ಮಿಕ ಕೇಂದ್ರ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳ ಸಹಕಾರಿಯಗಲಿವೆ ಎಂದರು.

ದಾನಿ ಎಚ್.ಎಮ್.ಮಹೇಶ್ವರಪ್ಪ, ಕುರುಬರಹಳ್ಳಿ ಮಲ್ಲೇಶಪ್ಪ, ಗ್ರಾಪಂ ಉಪಾಧ್ಯಕ್ಷ ಮೂರ್ತಿ, ಸಂಸ್ಥೆ ಸಂಚಾಲಕರಾದ ಬಿ.ಕೆ.ಮಂಗಳಗೌರಿ ಅಕ್ಕ, ದಾನಿ ಪ್ರಕಾಶ್, ರಾಜಪ್ಪ, ಎಚ್.ಎಮ್.ರುದ್ರೇಶ್, ಬಸವರಾಜ್, ಕಲಾವಿದ ಮಲ್ಲಿಕಾರ್ಜುನ್,ಯಶೋಧ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net