ಇಂದು ತುಳಸಿಗೇರಿಯ ಮಾರುತೇಶ್ವರ ದೇವರ ಓಕುಳಿ | ಸಂಭ್ರಮದ "ಹರಿಸೇವೆ'ಗೆ ಸಿದ್ಧವಾಗಿದ್ದು ಕ್ವಿಂಟಾಲ್​ ಕಡುಬುಗಳು

Kaladagi Hariseve
ತುಳಸಿಗೇರಿಯಲ್ಲಿ ಓಕುಳಿ ನಿಮಿತ್ತ ನಡೆದ "ಹರಿಸೇವೆ'ಗೆ ಕಡುಬು ತಯಾರಿಸುತ್ತಿರುವ ಮಹಿಳೆಯರು.
Published on

ಕಲಾದಗಿ: ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರ ತುಳಸಿಗೇರಿಯಲ್ಲಿ ಶ್ರೀ ಮಾರುತೇಶ್ವರ ದೇವರ ಓಕುಳಿ ನಿಮಿತ್ತ ಭಾನುವಾರ "ಹರಿಸೇವೆ' ಆಚರಿಸಲಾಯಿತು.

ಹರಿಸೇವೆಯಲ್ಲಿ ಪ್ರಸಾದಕ್ಕೆಂದು ಗ್ರಾಮದ ನೂರಾರು ಮಹಿಳೆಯರು, ಪುರುಷರು ಸೇರಿ 8&10 ಕ್ವಿಂಟಾಲ್​ನಷ್ಟು ಬೇಳೆ ಹಿಟ್ಟಿನ ಕಡುಬುಗಳನ್ನು ಸಿದ್ಧಪಡಿಸಿದ್ದರು. ಭಾನುವಾರ ಬೆಳಗ್ಗೆ ಪ್ರಾರಂಭವಾದ ಕಡುಬು ತಯಾರಿಕೆ ಕೆಲಸ ಸಂಜೆ 4ರ ವರೆಗೆ ಅವ್ಯಾಹತವಾಗಿ ನಡೆಯಿತು. ಸಂಜೆ ಮಾರುತೇಶ್ವರನಿಗೆ, ಬೆಣ್ಣಪ್ಪ ದೇವರಿಗೆ ದೊಡ್ಡದಾದ ಐದು ಕಡುಬುಗಳ ನೈವೇದ್ಯ ಅರ್ಪಿಸಲಾಯಿತು.

ಬಾಬುದಾರರಾದ ಐದು ಮನೆಗಳ ಗಂಡು ಮುತೈದೆಯರಿಗೆ ಗೌರವಾಚರಣೆಗಳು ನಡೆದು, ನಂತರ ಸಾವಿರಾರು ಮಂದಿ ಕಡುಬಿನ ಪ್ರಸಾದ ಸವಿದರು.

ಮೇ 13 ರಂದು ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಓಕುಳಿ ನಡೆಯಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಡೀ ಊರಿನ ಜನರೆಲ್ಲಾ ಸೇರಿ ಓಕುಳಿ ಸೇವೆ ಮಾಡಲಿದ್ದಾರೆ. ಇನ್ನುಳಿದ ಎರಡು ವರ್ಷ ಭಕ್ತರೊಬ್ಬರು ಈ ಸೇವೆಯ ಎಲ್ಲ ಖರ್ಚು ವೆಚ್ಚಗಳ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಬಾರಿ ಗ್ರಾಮದ ಲಚ್ಚಪ್ಪ ಸಂಕಣ್ಣವರ ಕುಟುಂಬದವರು ಓಕುಳಿಯ ಸಂಪೂರ್ಣ ಸೇವೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net