ಅಹಿಂಸಾ ಪ್ರತಿಪಾದಕ ಭಗವಾನ್ ಮಹಾವೀರರು

Lord Mahavira, the advocate of non-violence
ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿಯಲ್ಲಿ ಡಾ. ಸುರೇಖಾ ರಾಠೋಡ ಮಾತನಾಡಿದರು. ರಾಜೇಶ್ವರಿ ಮೊಪಗಾರ, ಹಾಸಿಂಪೀರ ವಾಲಿಕಾರ, ಬಾಬು ಲಮಾಣಿ ಮತ್ತಿತರರಿದಾರೆ.
Published on

ವಿಜಯಪುರ : ಭಗವಾನ್ ಮಹಾವೀರರು ಅಹಿಂಸಾ ಪ್ರತಿಪಾದಕರಾಗಿದ್ದರು. ಅಹಿಂಸಾ ತತ್ವ ಮತ್ತು ಜೈನ ಧರ್ಮದ ಪ್ರಚಾರ ಮಾಡುವ ಮೂಲಕ ಶ್ರೇಷ್ಠ ತ್ಯಾಗಿಗಳಾದರು ಎಂದು ಡಾ. ಸುರೇಖಾ ರಾಠೋಡ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಯೆ ಜೈನ ಧರ್ಮದ ಮೂಲ ಮಂತ್ರವಾಗಿದೆ. ನೀನೂ ಬದುಕು ಇತರರನ್ನು ಬದಕಲು ಬಿಡು ಎಂಬ ತತ್ವದ ತಳಪಾಯದಲ್ಲಿ ಧರ್ಮ ನಿಂತಿದೆ ಎಂದರು.

ಲಲಿತಕಲಾ ಆಕಾಡೆಮಿ ಸದಸ್ಯೆ ರಾಜೇಶ್ವರಿ ಮೊಪಗಾರ ಮಾತನಾಡಿ, ಮಹಾವೀರರು ಅಹಿಂಸೆಯಿಂದಲೇ ಶಾಂತಿ ಮಾರ್ಗ ಎಂದು ಬೋಧಿಸಿದರು. ಸಕಲ ಜೀವ ರಾಶಿಗಳ ಮೇಲೆ ದಯೆ ತೋರಬೇಕು. ಅಹಿಂಸಾ ಪರಮೋ ಧರ್ಮ ಎಂದು ಸಾರಿದರು. ನಾನು ಎಂಬ ಅಹಂಕಾರ ತ್ಯಜಿಸಿ ನಾವು ಎಂಬ ಮಾನವೀಯ ಮೌಲ್ಯದೊಂದಿಗೆ ಬದುಕಬೇಕು. ಸಮಾಜದ ಒಳಿತನ್ನು ಬಯಸಿ ದುಃಖತಪ್ತ ಜನರಿಗೆ ಜೈನಧರ್ಮ ಮೂಲ ಸಂದೇಶ ಸಾರಿದ್ದರ ಫಲವಾಗಿ ಜೈನಧರ್ಮ ಇಂದು ವಿಶ್ವಧರ್ಮವಾಗಿದೆ ಎಂದರು.

ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಮಹಿಬೂಬ ಮಾಲಬಾವಡಿ, ಬಾಬು ಲಮಾಣಿ, ಲತಾ ಗುಂಡಿ, ಎಂ.ಬಿ. ಮೋಪಗಾರ, ದೀಲಿಪ ಪ್ರಭಾಕರ, ವಿಜಯಲಕ್ಷ್ಮಿ ಹಳಕಟ್ಚಿ, ಅರ್ಜುನ ಶಿರೂರ, ಜಿ.ಎಸ್. ಬಳ್ಳೂರ, ಶ್ರೀಕಾಂತ ನಾಡಗೌಡ, ಆಶಾ ಬಿರಾದಾರ, ಮಡಿವಾಳಮ್ಮ ನಾಡಗೌಡ, ಬಸವರಾಜ ಬಿರಾದಾರ, ಅಹಮ್ಮದ ವಾಲಿಕಾರ, ಸುರೇಶ ಜಾಧವ, ಕಮಲಾ ಮುರಾಳ, ಚಂದ್ರಶೇಖರ ಗಬ್ಬೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net