

ನರಗುಂದ: ಕೃಷ್ಣನೆಂದರೆ ಎಲ್ಲರಿಗೂ ಇಷ್ಟ ಆಕರ್ಷಣೆಯಳ್ಳವನು. ಆತನ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ರಾಜಯೋಗಿನಿ ಪ್ರಭಕ್ಕ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷ್ಣನು ಸರ್ವಗುಣ ಸಂಪನ್ನ, ಮರ್ಯಾದಾ ಪುರುಷೋತ್ತಮ, ಅಹಿಂಸಾ ಧರ್ವಿುಯಾಗಿದ್ದನು. ಕೃಷ್ಣನಂತ ಗುಣ, ನಡವಳಿಕೆಗಳು ಸಮಾಜದಲ್ಲಿರುವ ನಮ್ಮೆಲ್ಲರದ್ದಾಗಬೇಕು ಎಂದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 100 ಕ್ಕೂ ಅಧಿಕ ಮಕ್ಕಳು ರಾಧಾ, ಕೃಷ್ಣ ವೇಷದಲ್ಲಿ ಮಿಂಚಿದರು. ತಾಪಂ ಪ್ರಥಮ ದರ್ಜೆ ಸಹಾಯಕಿ ರಾಜೇಶ್ವರಿ ಹಿರೇಮಠ, ಭೈರನಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೃತಿ ಸಂಗಳದ, ಕಣಕೀಕೊಪ್ಪ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಹಾದಿಮನಿ, ಶಿಕ್ಷಕ ಬಾಲು ಎಂ, ಎಸ್.ಪಿ. ಇಟಗಿ, ಹನುಮಂತ ಮಾದರ, ಡಾ.ವಿ.ಎಸ್. ವೀರನಗೌಡ್ರ, ಇತರರು ಉಪಸ್ಥಿತರಿದ್ದರು.