ಶ್ರೀಕೃಷ್ಣ ಸಂದೇಶಗಳು ಸಾರ್ವಕಾಲಿಕ ಸತ್ಯ

29 gkp 1
Published on


ಗೋಣಿಕೊಪ್ಪ : ಮಹಾ ಭಾರತದಲ್ಲಿ ಶ್ರೀಕೃಷ್ಣ ಹೇಳಿದ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿದೆ ಎಂದು ಬ್ರಹ್ಮಕುಮಾರಿ ಹಾಸನ ಸೇವಾ ಕೇಂದ್ರ ಸಂಚಾಲಕಿ ಆಶಾ ಅಕ್ಕ ಅವರು ಹೇಳಿದರು.


ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇತ್ತೀಚೆಗೆ ಗೋಣಿಕೊಪ್ಪಲುವಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಶ್ರೀಕೃಷ್ಣನು ಸರ್ವಗುಣ ಸಂಪನ್ನ, ಶ್ರೀಕೃಷ್ಣನ ಜೀವನ ಚರಿತ್ರೆಯಲ್ಲಿ ಒಂದೊಂದು ಘಟನೆಯಲ್ಲೂ ಆಳವಾದ ಆಧ್ಯಾತ್ಮಿಕ ರಹಸ್ಯ ಹಾಗೂ ಜೀವನ ಮೌಲ್ಯ ಅಡಗಿದೆ ಎಂದರು.

ಪುಟಾಣಿ ಮಕ್ಕಳು ಸೇರಿದಂತೆ ಯುವಕ, ಯುವತಿಯರು ಶ್ರೀಕೃಷ್ಣ ಹಾಗೂ ರಾಧೆ ವೇಷಧಾರಿಗಳಾಗಿ ಗಮನ ಸೆಳೆದರು.
ಪ್ರಜಾಪಿತ ಬ್ರಹ್ಮಕುಮಾರೀಶ್ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ರೇಖಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಕೊಪ್ಪ ಗ್ರಾ.ಪಂ. ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬ್ರಹ್ಮಾಕುಮಾರಿ ಕಾವ್ಯಾ ಅಕ್ಕ ಕೇಂದ್ರದ ಬಬಿತ ಅಕ್ಕ ಬಿ.ಕೆ.ರೇಷ್ಮಾ ಅಕ್ಕ, ಅಯ್ಯಪ್ಪ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net