ಶ್ರೀಕೃಷ್ಣನ ಜೀವನವೇ ಮನುಕುಲಕ್ಕೆ ಆದರ್ಶಪ್ರಾಯ

Krishana Programme
Published on

ಬ್ಯಾಡಗಿ: ಪ್ರತಿಯೊಬ್ಬರೂ ಸರಿ- ತಪ್ಪು ವಿಚಾರ ಬಂದಾಗ ಭಗವದ್ಗೀತೆ ಸ್ಮರಿಸುತ್ತಾರೆ ಎಂದು ಪುರಸಭೆ ಸದಸ್ಯೆ ಗಾಯತ್ರಿ ರಾಯ್ಕರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯåಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಕೃಷ್ಣ ಪರಮಾತ್ಮ ರಚಿಸಿದ ಭಗವದ್ಗೀತೆ ಅಂದಿನ ಸಂವಿಧಾನವಾಗಿತ್ತು ಎಂದರೂ ತಪ್ಪಲ್ಲ. ಧರ್ಮ-ಕರ್ಮ, ಪಾಪ-ಪುಣ್ಯ, ನ್ಯಾಯಅನ್ಯಾಯಗಳ ಕುರಿತು ಪರಿಚಯಿಸಿದ್ದು ಅವುಗಳೆಲ್ಲವೂ ಸಾರ್ವಕಾಲಿಕ ಸತ್ಯವೆಂದು ಇಂದಿಗೂ ನಂಬಿದ್ದಾರೆ. ಶ್ರೀಕೃಷ್ಣನ ಜೀವನವೇ ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದು, ಭರತ ಭೂಮಿಯ ಶ್ರೇಷ್ಠತೆ ಶ್ರೀಕೃಷ್ಣನ ಜೀವನಾದರ್ಶದಲ್ಲಿ ಅಡಗಿದೆ ಎಂದರು.

ಜನ್ಮಾಷ್ಟಮಿ ಕಾರ್ಯಕ್ರಮ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಸಮಾಜದಲ್ಲಿರುವ ಪ್ರತಿಯೊಬ್ಬರೂ ಆಚರಿಸುವಂತಾಗಲಿ ಎಂದರು. ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ, ಎಸ್.ಜಿ. ಕುಲಕರ್ಣಿ, ಅದ್ವಿತ್ ನಾಯಕ, ನಾಗರಾಜ ಗೂಳೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net